ಕರ್ನಾಟಕ ಬಜೆಟ್ 2025-26 - ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ.? - News Ubaar

ಇತ್ತೀಚಿನ ಸುದ್ದಿ

Subscribe

ಶುಕ್ರವಾರ, ಮಾರ್ಚ್ 7, 2025

ಕರ್ನಾಟಕ ಬಜೆಟ್ 2025-26 - ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ.?


ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ತಮ್ಮ ದಾಖಲೆಯ 16ನೇ ಬಜೆಟ್‌ ಮಂಡನೆ ಮಾಡಿದರು. ರಾಜ್ಯದ ಆರ್ಥಿಕತೆಯನ್ನು ಮುಖ್ಯವನ್ನಾಗಿಸಿಕೊಂಡು ಮಂಡಿಸಿದ ಈ ಬಾರಿಯ ಬಜೆಟ್‌ನಲ್ಲಿ ಎಲ್ಲಾ ಇಲಾಖೆಗಳನ್ನು ಗಮನದಲ್ಲಿಟ್ಟುಕೊಂಡು ಸಿದ್ದರಾಮಯ್ಯ ಬಜೆಟ್‌ ಮಂಡಿಸಿದ್ದಾರೆ.


ಅದರಲ್ಲಿ ಶಿಕ್ಷಣ, ಮಹಿಳಾ ಸಬಲೀಕರಣ, ಸಮಾಜ ಕಲ್ಯಾಣ ಸೇರಿದಂತೆ ಎಲ್ಲಾ ಇಲಾಖೆಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಬಜೆಟ್‌ ಮಂಡಿಸಿದ್ದಾರೆ.


ಈ ಬಜೆಟ್‌ ಬಗ್ಗೆ ವಿರೋಧ ಪಕ್ಷಗಳು ಟೀಕಾಪ್ರಹಾರಗಳನ್ನು ಮಾಡುತ್ತಾ ಬರುತ್ತಿದ್ದು, ಬೊಗಳೆ ರಾಮಯ್ಯ ಅವರ ಕೊನೆಯ ಬಜೆಟ್‌ ಎಂದು ಬಿಜೆಪಿ ಟೀಕಿಸಿದೆ.



ಈ ಮಿಶ್ರ ಪ್ರತಿಕ್ರಿಯೆ ನಡುವೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ ನೀಡಿದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ.


1. ಶಿಕ್ಷಣ ಇಲಾಖೆ: 45,286 ಕೋಟಿ ರೂಪಾಯಿ

2. ಮಹಿಳಾ/ಮಕ್ಕಳ ಕಲ್ಯಾಣ ಇಲಾಖೆ: 34,955 ಕೋಟಿ ರೂಪಾಯಿ

3. ಇಂಧನ ಇಲಾಖೆ: 26,896 ಕೋಟಿ ರೂಪಾಯಿ

4. ಗ್ರಾಮೀಣಾಭಿವೃದ್ಧಿ ಇಲಾಖೆ: 26,735 ಕೋಟಿ ರೂಪಾಯಿ

5. ನೀರಾವರಿ ಇಲಾಖೆ: 22,181 ಕೋಟಿ ರೂಪಾಯಿ

6. ನಗರಾಭಿವೃದ್ಧಿ, ವಸತಿ ಇಲಾಖೆ: 21,405 ಕೋಟಿ ರೂಪಾಯಿ

7. ಒಳ ಆಡಳಿತ ಮತ್ತು ಸಾರಿಗೆ ಇಲಾಖೆ: 20,625 ಕೋಟಿ ರೂಪಾಯಿ

8. ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ: 17,473 ಕೋಟಿ ರೂಪಾಯಿ

9. ಕಂದಾಯ ಇಲಾಖೆ: 17,201 ಕೋಟಿ ರೂಪಾಯಿ

10. ಸಮಾಜ ಕಲ್ಯಾಣ ಇಲಾಖೆ: 16,955 ಕೋಟಿ ರೂಪಾಯಿ

11. ಲೋಕೋಪಯೋಗಿ ಇಲಾಖೆ: 11,841 ಕೋಟಿ ರೂಪಾಯಿ

12. ಆಹಾರ ಇಲಾಖೆ: 8,275 ಕೋಟಿ ರೂಪಾಯಿ

13. ಕೃಷಿ, ತೋಟಗಾರಿಕೆ ಇಲಾಖೆ: 7,145 ಕೋಟಿ ರೂಪಾಯಿ

14. ಪಶು ಸಂಗೋಪನೆ, ಮೀನುಗಾರಿಕೆ ಇಲಾಖೆ: 3,977 ಕೋಟಿ ರೂಪಾಯಿ

15. ಇತರೆ: 1,49,857 ಕೋಟಿ ರೂಪಾಯಿ

Pages