ನವದೆಹಲಿ: ವೈಫಲ್ಯ, ಸೋಲನ್ನು ಹಿನ್ನಡೆ ಎಂದು ಭಾವಿಸಿದೇ ಯಶಸ್ಸಿನ ಮೆಟ್ಟಿಲುಗಳಾಗಿ ಪರಿವರ್ತಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.
ಇಂದು (ಫೆ.10) ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳೊಂದಿಗೆ ʼಪರಿಕ್ಷಾ ಪೆ ಚರ್ಚಾʼ ಕಾರ್ಯಕ್ರಮ ನಡೆಸಿ, ಗಣಿತವನ್ನು ನಿಯಂತ್ರಿಸುವ ತಂತ್ರಗಳ ಬಗ್ಗೆ ಚರ್ಚೆ ನಡೆಸಿದರು.
ಪರೀಕ್ಷೆಯೇ ಜೀವನ ಎಂಬ ಭಾವನೆಯೊಂದಿಗೆ ಮಕ್ಕಳನ್ನು ಪುಸ್ತಕಗಳ ಸೆರೆಮನೆಯಲ್ಲಿ ಬಂಧಿಸಬಾರದು. ವಿದ್ಯಾರ್ಥಿಗಳು ತಮ್ಮ ಬಾಲ್ಯದ ಜೀವನದಲ್ಲಿ ಓದುವುದರ ಜೊತೆಗೆ ಹೊರಗಿನ ಪ್ರಪಂಚ ತಿಳಿಯುವ ಬಗ್ಗೆ ಪೋಷಕರು ಚಿಂತಿಸಬೇಕು ಎಂದು ತಿಳಿಸಿದರು.
ಪರೀಕ್ಷೆಯ ಆತಂಕ ಮತ್ತು ವೈಫಲ್ಯದ ವಿರುದ್ಧ ಹೋರಾಡಲು ಏನು ಮಾಡಬೇಕು ಎಂದು ಓರ್ವ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೋದಿ, ವೈಫಲ್ಯವನ್ನು ಹಿನ್ನಡೆ ಎಂದು ಭಾವಿಸದೇ ಅದನ್ನು ಯಶಸ್ಸಿನ ಮೆಟ್ಟಿಲುಗಳಾಗಿ ಪರಿವರ್ತಿಸಬೇಕು ಎಂದರು.
