ಬೆಂಗಳೂರು: ರಾಜ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಕೇವಲ ₹4,500 ಕೋಟಿ ಮಾತ್ರ ಮೀಸಲಾಗಿರುವುದನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಸಿಎಂ, "ರಾಜ್ಯದ ಬಜೆಟ್ ಗಾತ್ರ ₹4.09 ಲಕ್ಷ ಕೋಟಿ. ಇದರಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಕೇವಲ ₹4,500 ಕೋಟಿ ನೀಡಲಾಗಿದೆ. ಇದನ್ನೇ ಕೆಲ ಬಿಜೆಪಿ ನಾಯಕರು ‘ಹಲಾಲ್ ಬಜೆಟ್’, ‘ಓಲೈಕೆ ಬಜೆಟ್’ ಎಂದು ಟೀಕಿಸುತ್ತಿದ್ದಾರೆ. ಇವರಿಗೆ ಮಾನ – ಮರ್ಯಾದೆ ಯಾವತ್ತೂ ಇರೋದಿಲ್ಲ!" ಎಂದು ಕಿಡಿಕಾರಿದ್ದಾರೆ.
ಅಲ್ಪಸಂಖ್ಯಾತರು ಎಂದರೆ ಮುಸ್ಲಿಂ, ಕ್ರಿಶ್ಚಿಯನ್, ಸಿಖ್ಖ್, ಜೈನ, ಬೌದ್ಧ ಸಮುದಾಯಗಳಿಗೂ ಒಳಪಟ್ಟಿದ್ದು, ಅವರ ಅಭಿವೃದ್ಧಿಗಾಗಿ ಸರಕಾರ ಕೊಡುಗೆ ನೀಡುವುದರಲ್ಲಿ ಯಾವ ತಪ್ಪೂ ಇಲ್ಲ ಎಂದು ಅವರು ಹೇಳಿದರು.

