ಕೇರಳದ ಚೆಂಗರ ಭೂಸಮರ ಹೋರಾಟಗಾರ ದಾಮೋದರನ್ ಅಂತ್ಯಸಂಸ್ಕಾರ ನೆರೆವೇರಿಸಿದ ಹಮೀದ್ ಹೊಸಂಗಡಿ ನೇತ್ರತ್ವದ ಮಂಜೇಶ್ವರ SDPI ತಂಡ. - News Ubaar

ಇತ್ತೀಚಿನ ಸುದ್ದಿ

Subscribe

ಶನಿವಾರ, ಸೆಪ್ಟೆಂಬರ್ 11, 2021

ಕೇರಳದ ಚೆಂಗರ ಭೂಸಮರ ಹೋರಾಟಗಾರ ದಾಮೋದರನ್ ಅಂತ್ಯಸಂಸ್ಕಾರ ನೆರೆವೇರಿಸಿದ ಹಮೀದ್ ಹೊಸಂಗಡಿ ನೇತ್ರತ್ವದ ಮಂಜೇಶ್ವರ SDPI ತಂಡ.

ನ್ಯೂಸ್ ಉಬಾರ್: ಸೆ.11
ಕೇರಳದ ಚೆಂಗರ ಭೂಸಮರ ಹೋರಾಟಗಾರ ದಾಮೋದರನ್ ಎಂಬವರ ಅಂತ್ಯಸಂಸ್ಕಾರವನ್ನು ಹಮೀದ್ ಹೊಸಂಗಡಿ ಸಾಹೇಬ್ ನೇತ್ರತ್ವದ ಮಂಜೇಶ್ವರ SDPI ತಂಡ ನೆರವೇರಿಸಿತು.

ಮಂಜೇಶ್ವರದ ಆದಿವಾಸಿ ಕಾಲೋನಿ ಯಲ್ಲಿ ವಾಸವಾಗಿದ್ದ ದಾಮೋದರನ್ ರವರು ವಯೋಸಹಜ ಕಾಯಿಲೆಯಿಂದ ಗುರುವಾರದಂದು ಮರಣ ಹೊಂದಿದ್ದರು. 

ಅಂತ್ಯಸಂಸ್ಕಾರಕ್ಕಾಗಿ ಬೇಕಾದ ಶವಪೆಟ್ಟಿಗೆ ಖರೀದಿಸಲೂ ಸಾಧ್ಯವಾಗದೇ ಸಹಾಯವನ್ನು ಯಾಚಿಸಿದ ದಾಮೋದರನ್ ರವರ ಧರ್ಮಪತ್ನಿಯ ಕರೆಗೆ ಓಗೊಟ್ಟು ಸಂಪೂರ್ಣ ಅಂತ್ಯವಿಧಿಯನ್ನು  ಮಂಜೇಶ್ವರ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ತಂಡ ಪೂರೈಸಿಕೊಟ್ಟಿದೆ.

Pages