ಬಂಟ್ವಾಳ: ಮಾರಕಾಸ್ತ್ರಗಳಿಂದ ಇರಿದು ಯುವಕನ ಬರ್ಬರ ಕೊಲೆ - News Ubaar

ಇತ್ತೀಚಿನ ಸುದ್ದಿ

Subscribe

ಸೋಮವಾರ, ಸೆಪ್ಟೆಂಬರ್ 13, 2021

ಬಂಟ್ವಾಳ: ಮಾರಕಾಸ್ತ್ರಗಳಿಂದ ಇರಿದು ಯುವಕನ ಬರ್ಬರ ಕೊಲೆ

ನ್ಯೂಸ್ ಉಬಾರ್:
ಯುವಕನೋರ್ವನನ್ನು ಮಾರಕಾಸ್ತ್ರದಿಂದ ಕಡಿದು ಕೊಲೆಗೈದ ಘಟನೆ ಬಂಟ್ವಾಳ ತಾಲೂಕಿನ ಕಕ್ಯೆಪದವು ಕೊಡ್ಯಮಲೆ ಗುಡ್ಡೆ ಎಂಬಲ್ಲಿ ಸೋಮವಾರದಂದು ನಡೆದಿದೆ.

ಕೊಲೆಯಾದ ಯುವಕನನ್ನು ಸ್ಥಳೀಯ ನಿವಾಸಿ ರಫೀಕ್ (26) ಎಂದು ಗುರುತಿಸಲಾಗಿದೆ. ಕಕ್ಯಪದವು ನಿವಾಸಿ ಸಿದ್ದೀಕ್ ಎಂಬಾತನಿಗೆ ರಫೀಕ್ ಜೊತೆ ವೈಯಕ್ತಿಕ ದ್ವೇಷವಿದ್ದು, ಇಂದು ಮಾರಕಾಸ್ತ್ರಗಳಿಂದ ಕೊಲೆಗೈದಿರುವುದಾಗಿ ವರದಿಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Pages