ಸೆ 11: ಮೀನುಗಾರರನ್ನು ಹೊತ್ತೋಯ್ಯುತ್ತಿದ್ದ ಗಿಲ್ ನೆಟ್ ಬೋಟ್ ಪಣಂಬೂರು ಬೀಚ್ ಬಳಿ ಅಪಘಾತಕ್ಕಿಡಾಗಿ ಒರ್ವ ಮೀನುಗಾರ ಸಮುದ್ರ ಪಾಲಾಗಿರುವ ಘಟನೆ ಶನಿವಾರ ನಡೆದಿದೆ . ಬೋಟ್ ನಲ್ಲಿ ಒಟ್ಟು ಐದು ಮಂದಿ ಪ್ರಯಾಣಿಸುತ್ತಿದ್ದು , ಅವರ ಪೈಕಿ ನಾಲ್ವರನ್ನು ಸ್ಥಳೀಯ ಈಜುಗಾರರು ರಕ್ಷಣೆ ಮಾಡಿದ್ದಾರೆ.
ಆದರೆ ಶರೀಫ್ ಎಂಬವರು ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿದ್ದು ಅವರಿಗಾಗಿ ತೀವ್ರ ಶೋಧ ಕಾರ್ಯಚಾರಣೆ ನಡೆಸಲಾಗುತ್ತಿದೆ. ಅಬ್ದುಲ್ ಅಜೀಜ್, ಇಂತಿಯಾಜ್, ಸಿನಾನ್, ಫೈರೋಜ್ ದುರಂತಕ್ಕಿಡಾದ ದೋಣಿಯಲ್ಲಿ ಪ್ರಯಾಣಿಸುತ್ತಿದ್ದವರು.
ಮೀನುಗಾರಿಕೆಗೆ ತೆರಳಿದ್ದ ಗಿಲ್ ನೆಟ್ ದೋಣಿಗೆ ಬೃಹತ್ ಅಲೆ ಅಪ್ಪಳಿಸಿದ್ದು ಈ ವೇಳೆ ದೋಣಿಯಲ್ಲಿದ್ದ 5 ಮಂದಿ ಮೀನುಗಾರರು ಸಮುದ್ರಕ್ಕೆ ಎಸೆಯಲ್ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅವಘಡವಾದ ಗಿಲ್ ನೆಟ್ ಬೋಟ್ ಅಝರ್ ಎಂಬವರ ಮಾಲಕತ್ವದ್ದು ಎಂದು ಹೇಳಲಾಗಿದೆ. ದೋಣಿಯನ್ನು ದಡಕ್ಕೆ ತರಲಾಗಿದೆ.