ಮಂಗಳೂರು: ಪರವಾನಗಿ ಇಲ್ಲದೆ ಸ್ಫೋಟಕ ಸಂಗ್ರಹ,ಇಬ್ಬರ ಬಂಧನ! - News Ubaar

ಇತ್ತೀಚಿನ ಸುದ್ದಿ

Subscribe

ಶನಿವಾರ, ಸೆಪ್ಟೆಂಬರ್ 18, 2021

ಮಂಗಳೂರು: ಪರವಾನಗಿ ಇಲ್ಲದೆ ಸ್ಫೋಟಕ ಸಂಗ್ರಹ,ಇಬ್ಬರ ಬಂಧನ!

ನ್ಯೂಸ್ ಉಬಾರ್:
ಮಂಗಳೂರು: ಕುಳಾಯಿ ಗ್ರಾಮದ ವಿದ್ಯಾನಗರದ ಶೆಡ್ ಒಂದರ ಮೇಲೆ ಪರವಾನಗಿ ಇಲ್ಲದೆ ಸ್ಫೋಟಕ ರಾಸಾಯನಿಕ ಸಂಗ್ರಹಿಸಿಟ್ಟಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಇಬ್ಬರನ್ನು ಬಂಧಿಸಿ, ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ವಿದ್ಯಾನಗರದ ಗಂಗಾಧರ (53), ಯಾದವ ಬಿ.ಎಂ (48) ಬಂಧಿತ ಆರೋಪಿಗಳು.‌ ಬಂಧಿತರಿಂದ 600 ಗ್ರಾಂ ಅಲ್ಯೂಮಿನಿಯಂ ಬೀಡ್‌ಗಳು, 9 ಕೆ.ಜಿ ಚಾರ್ಕೋಲ್, 10 ಕೆ.ಜಿ ಗನ್ ಪೌಡರ್, 2 ಕೆ.ಜಿ ಗಂಧಕದ ಗಟ್ಟಿ, 4 ಕೆ.ಜಿ ಗಂಧಕದ ಪೌಡರ್, 11 ಕೆ.ಜಿ ಸೆಣಬಿನ ಹುರಿ, ಸುರುಳಿ ಮಾಡಿದ ಸಣ್ಣ ಪೇಪರ್‌ಗಳು, ದೊಡ್ಡ ಪೇಪರ್‌ಗಳು, ವೃತ್ತಾಕಾರದ ಮರದ ಕೋಲು, ಕಬ್ಬಿಣದ ಕೋಲುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ನಿರ್ದೇಶನದಲ್ಲಿ ಸುರತ್ಕಲ್ ಪೊಲೀಸ್ ನಿರೀಕ್ಷಕ ಚಂದ್ರಪ್ಪ ಕೆ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು.

Pages