ದ್ವಿತೀಯ ಪಿಯು ಫಲಿತಾಂಶ: ಇಲಾಖೆ ಫಲಿತಾಂಶ ತಿರಸ್ಕರಿಸಿದ 36 ವಿದ್ಯಾರ್ಥಿಗಳು ಅನುತ್ತೀರ್ಣ! - News Ubaar

ಇತ್ತೀಚಿನ ಸುದ್ದಿ

Subscribe

ಭಾನುವಾರ, ಸೆಪ್ಟೆಂಬರ್ 19, 2021

ದ್ವಿತೀಯ ಪಿಯು ಫಲಿತಾಂಶ: ಇಲಾಖೆ ಫಲಿತಾಂಶ ತಿರಸ್ಕರಿಸಿದ 36 ವಿದ್ಯಾರ್ಥಿಗಳು ಅನುತ್ತೀರ್ಣ!

ನ್ಯೂಸ್ ಉಬಾರ್:
ಬೆಂಗಳೂರು: ಕೋವಿಡ್ ಕಾರಣದಿಂದ ಈ ಬಾರಿ ದ್ವಿತೀಯ ಪಿಯುಸಿಯಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಹಿಂದಿನ ತರಗತಿಗಳ ಫಲಿತಾಂಶದಂತೆ ಉತ್ತೀರ್ಣ ಮಾಡಲಾಗಿತ್ತು. ಆದರೆ ಪಿಯು ಇಲಾಖೆ ನೀಡಿದ್ದ ಫಲಿತಾಂಶವನ್ನು ತಿರಸ್ಕರಿಸಿ, ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಫಲಿತಾಂಶ ಇಂದು ಪ್ರಕಟವಾಗಿದೆ

ಪಿಯು ಇಲಾಖೆ ನೀಡಿದ್ದ ಫಲಿತಾಂಶವನ್ನು ತಿರಸ್ಕರಿಸಿ, 592 ಹೊಸ ಅಭ್ಯರ್ಥಿಗಳು (ಫ್ರೇಶರ್) ಪರೀಕ್ಷೆ ಬರೆದಿದ್ದರು. ಅದರಲ್ಲಿ 556 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, 36 ಮಂದಿ ಅನುತ್ತೀರ್ಣರಾಗಿದ್ದಾರೆ.

ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಈ ಹಿಂದಿನ ಫಲಿತಾಂಶ ಪುನಃ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಪೂರಕ ಪರೀಕ್ಷೆ ಬರೆದೇ ಪಾಸ್ ಆಗಬೇಕಿದೆ.

ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ 351 ಮಂದಿ ಪರೀಕ್ಷೆ ಬರೆದಿದ್ದು, ಅವರಲ್ಲಿ 183 ಮಂದಿ ಉತ್ತೀರ್ಣರಾಗಿ 168 ಮಂದಿ ವಿದ್ಯಾರ್ಥಿಗಳು ಫೇಲಾಗಿದ್ದಾರೆ. 17,470 ಮಂದಿ ಖಾಸಗಿಯಾಗಿ ಪರೀಕ್ಷೆ ಬರೆದಿದ್ದು ಅವರಲ್ಲಿ 4768 ಮಂದಿ ಉತ್ತೀರ್ಣರಾಗಿದ್ದಾರೆ.

Pages