ನ್ಯೂಸ್ ಉಪ್ಪಿನಂಗಡಿ: ಫೆ 11; ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕಳೆದ ಜನವರಿ 31 ರಂದು ಬಿಜೆಪಿ ಪಕ್ಷದ ಬಹಿರಂಗ ಕಾರ್ಯಕ್ರಮವೊಂದರಲ್ಲಿ ಕೋಮುಭಾವನೆಗೆ ಧಕ್ಕೆಯಾಗುವ ರೀತಿಯಲ್ಲಿ ಉದ್ರೇಕಕಾರಿ ಭಾಷಣ ಮಾಡಿದ್ದು ಈ ಬಗ್ಗೆ ಎಸ್‌ಡಿಪಿಐ ಪಕ್ಷದ ಮುಸ್ತಫಾ ಎಂಬುವವರು ಭಾಷಣ ವಿಡಿಯೋ ಸಿಡಿಯ ಲಗತ್ತಿಸಿದ ದಾಖಲೆಯೊಂದಿಗೆ ಉಪ್ಪಿನಂಗಡಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ತನ್ನ ಕಾರ್ಯಕರ್ತರಲ್ಲಿ ಗೋವನ್ನು ಮುಟ್ಟುವವರ ಕೈಕಾಲು ಕಡಿಯಿರಿ ನಾಲಗೆ ಸೀಳಿರಿ ಎನ್ನುವ ರೀತಿಯಲ್ಲಿ ಭಾಷಣ ಮಾಡಿದ್ದಾರೆ ಮತ್ತು ಸ್ಥಳೀಯ ಶಾಸಕ ಹರೀಶ್ ಪೂಂಜ ಒಂದು ನಿರ್ಧಿಷ್ಟ ಸಮುದಾವನ್ನು ಅವಹೇಳನ ಮಾಡಿರುತ್ತಾರೆ, ಇದರಿಂದ ತನ್ನ ಕಾರ್ಯಕರ್ತರು ಇದು ಪಕ್ಷದ ಅಧೀಕೃತ ಆದೇಶವೆಂಬಂತೆ ಅಲ್ಲಲ್ಲಿ ಅಮಾಯಕರ ಮೇಲೆ ಚೂರಿ ಇರಿತ ಹಲ್ಲೆ ಪ್ರಕರಣಗಳು ನಡೆಯುತ್ತಿದೆ, ಈ ಬಗ್ಗೆ ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಿಕೊಂಡು ಇಂತಹ ಸಮಾಜದ ಸ್ವಾಸ್ಥ್ಯ ಕದಡುವಂತಹ ಭಾಷಣಗೈದವರನ್ನು ಕಾನೂನಿನಡಿಯಲ್ಲಿ ಬಂಧಿಸಬೇಕಾಗಿ ಉಪ್ಪಿನಂಗಡಿ ಎಸ್‌ಡಿಪಿಐ ಪಕ್ಷದ ಮುಸ್ತಫಾ ಎಂಬುವವರು ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ದೂರುದಾರರ ಪರವಾಗಿ ಝಕರಿಯಾ ಕೊಡಿಪ್ಪಾಡಿ, ಶುಕೂರು ಕುಪ್ಪೆಟ್ಟಿ, ರಶೀದ್ ಮಠ ನಿಯೋಗದಲ್ಲಿದ್ದರು.