ಪುತ್ತೂರು ಆಸುಪಾಸಿ‌ನ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ |ಪುತ್ತೂರು ಕಮ್ಯುನಿಟಿ ಸೆಂಟರ್ನಲ್ಲಿ ನಾಳೆ ಸಿಇಟಿ/ನೀಟ್ ವಿದ್ಯಾರ್ಥಿಗಳಿಗೆ ಉಚಿತ ಮಾರ್ಗದರ್ಶನ ಶಿಬಿರ . - News Ubaar

ಇತ್ತೀಚಿನ ಸುದ್ದಿ

Subscribe

ಶುಕ್ರವಾರ, ಸೆಪ್ಟೆಂಬರ್ 10, 2021

ಪುತ್ತೂರು ಆಸುಪಾಸಿ‌ನ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ |ಪುತ್ತೂರು ಕಮ್ಯುನಿಟಿ ಸೆಂಟರ್ನಲ್ಲಿ ನಾಳೆ ಸಿಇಟಿ/ನೀಟ್ ವಿದ್ಯಾರ್ಥಿಗಳಿಗೆ ಉಚಿತ ಮಾರ್ಗದರ್ಶನ ಶಿಬಿರ .

ನ್ಯೂಸ್ ಉಬಾರ್ :
2021ನೇ ಸಾಲಿನ ಸಿಇಟಿ/ನೀಟ್ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಪೂರ್ವ ಮಾರ್ಗದರ್ಶನ ಶಿಬಿರವನ್ನು ಪುತ್ತೂರು ಕಮ್ಯುನಿಟಿ ಸೆಂಟರ್ ಹಮ್ಮಿಕೊಂಡಿದೆ. ನಾಳೆ (ಸೆ.11) ಶನಿವಾರ ಬೆಳಿಗ್ಗೆ 9.30ಕ್ಕೆ ಪುತ್ತೂರು ಕೆಎಸ್ಆರ್'ಟಿಸಿ ಬಸ್ಸು ನಿಲ್ದಾಣ ಮುಂಭಾಗದ ಎಎಂ ಶಾಲಿಮಾರ್ ಕಾಂಪ್ಲೆಕ್ಸ್'ನ 3ನೇ ಮಹಡಿಯಲ್ಲಿರುವ ಪುತ್ತೂರು ಕಮ್ಯುನಿಟಿ ಸೆಂಟರ್' ಸಭಾಂಗಣದಲ್ಲಿ ಶಿಬಿರ ನಡೆಯಲಿದೆ.

ನಾಡಿನ ಖ್ಯಾತ ಕರಿಯರ್ ಕೌನ್ಸಿಲರ್ ಮಂಗಳೂರಿನ ಉಮರ್ ಯು.ಹೆಚ್. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದು, ಸಿಇಟಿ/ನೀಟ್ ಆನ್'ಲೈನ್ ಕೌನ್ಸಿಲಿಂಗ್ ವಿಧಾನ ಮತ್ತು ಹಂತಗಳು, ದಾಖಲೆಗಳ ಪರಿಶೀಲನೆ, ಲಭ್ಯವಿರುವ ವಿವಿಧ ವಿಭಾಗದ ಸೀಟುಗಳು, ವಿದ್ಯಾರ್ಥಿಗಳಿಗೆ ಸರಕಾರದ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಯೋಜನೆಗಳು ಹಾಗೂ ಕರಿಯರ್ ಆಯ್ಕೆಯ ಅಗತ್ಯತೆ ಕುರಿತಂತೆ ಸಮಗ್ರ ಮಾರ್ಗದರ್ಶನ ನೀಡುವರು.

ಪ್ರವೇಶ ಉಚಿತವಾಗಿದ್ದು, ಹೆಚ್ಚಿನ ಮಾಹಿತಿಗಳಿಗಾಗಿ ಆಸಕ್ತ ವಿದ್ಯಾರ್ಥಿಗಳು ಮೊ.ಸಂ.9845054191, 9845899107ನ್ನು ಸಂಪರ್ಕಿಸಬಹುದು ಎಂದು ಪುತ್ತೂರು ಕಮ್ಯುನಿಟಿ ಸೆಂಟರ್'ನ ಮುಖ್ಯಸ್ಥ ಹನೀಫ್ ಪುತ್ತೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Pages