ಉಪ್ಪಿನಂಗಡಿ: ಮುಖ್ಯ ಶಿಕ್ಷಕನಿಂದ ಅತ್ಯಾಚಾರ ಆರೋಪ - ಶಿಕ್ಷಕಿಯಿಂದ ದೂರು - News Ubaar

ಇತ್ತೀಚಿನ ಸುದ್ದಿ

Subscribe

ಭಾನುವಾರ, ನವೆಂಬರ್ 10, 2019

ಉಪ್ಪಿನಂಗಡಿ: ಮುಖ್ಯ ಶಿಕ್ಷಕನಿಂದ ಅತ್ಯಾಚಾರ ಆರೋಪ - ಶಿಕ್ಷಕಿಯಿಂದ ದೂರು


ಟ್ರೂ ಮೀಡಿಯಾ ನ್ಯೂಸ್,ನ.11

ಉಪ್ಪಿನಂಗಡಿ, ಶಾಲಾ ಮುಖ್ಯ ಶಿಕ್ಷಕ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಶಾಲಾ ಶಿಕ್ಷಕಿಯೋರ್ವಳು 7 ತಿಂಗಳ ನಂತರ ದೂರು ದಾಖಲಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಪದ್ಮುಂಜದ ಸರಕಾರಿ ಪ್ರಾಥಮಿಕ ಶಾಲೆಯ ಮಂಜುನಾಥ್ (41) ಅವರು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು 28 ವರ್ಷದ ಅತಿಥಿ ಉಪನ್ಯಾಸಕಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯ ಶಿಕ್ಷಕರು ಸರಕಾರಿ ಶಾಲೆಯಲ್ಲಿ ನನಗೆ ಖಾಯಂ ಶಿಕ್ಷಕಿಯನ್ನಾಗಿ ಮಾಡುತ್ತೇನೆ ಎಂದು ಆಮಿಷವೊಡ್ಡಿ 7 ತಿಂಗಳ ಹಿಂದೆ ಎಪ್ರಿಲ್ 14 ರ ಅಂಬೇಡ್ಕರ್ ಜಯಂತಿಯಂದು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ಆದರೆ ಹೆದರಿದ ನಾನು ಈವರೆಗೂ ಯಾವುದೆ ದೂರು ದಾಖಲು ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ.

ಶಿಕ್ಷಕಿಯನ್ನು ವೈದ್ಯಕೀಯ ತಪಾಸಣೆಗೆ ಮಂಗಳೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ವರದಿಯ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ದೂರು ನೀಡಿರುವ ಅತಿಥಿ ಶಿಕ್ಷಕಿಯ ಉಪನ್ಯಾಸ ಶೈಲಿ ಉತ್ತಮವಿಲ್ಲವೆಂದು ಆಕೆಯನ್ನು ಕೆಲಸದಿಂದ ತೆಗೆದು ಹಾಕಿ ಬದಲಿ ಅತಿಥಿ ಶಿಕ್ಷಕಿಯನ್ನು ನೇಮಿಸಲಾಗಿತ್ತು.

ಪೊಲೀಸರು ಈ ಕುರಿತು ಎರಡು ಆಯಾಮಗಳಿಂದ ತನಿಖೆ ಆರಂಭಿಸಿದ್ದಾರೆ.

Pages