ಎಂಇಪಿ ನಾಯಕಿ ನೌಹಿರಾ ಶೇಖ್ ಕೇಸ್ ಖುಲಾಸೆಗೆ ಕೋಟಿ ಕೋಟಿ ಹಣ ಪಡೆದ ಜನಾರ್ದನ ರೆಡ್ಡಿ? - News Ubaar

ಇತ್ತೀಚಿನ ಸುದ್ದಿ

Subscribe

ಬುಧವಾರ, ನವೆಂಬರ್ 7, 2018

ಎಂಇಪಿ ನಾಯಕಿ ನೌಹಿರಾ ಶೇಖ್ ಕೇಸ್ ಖುಲಾಸೆಗೆ ಕೋಟಿ ಕೋಟಿ ಹಣ ಪಡೆದ ಜನಾರ್ದನ ರೆಡ್ಡಿ?

Image result for JANARDANA REDDY AND NOUHEERA SHEIK
ಟ್ರೂ ಮೀಡಿಯಾ ನ್ಯೂಸ್,ನ:7
ಬ್ಯಾಂಕ್ ನೀಡುವ ಬಡ್ಡಿಗಿಂತಲೂ ಹೆಚ್ಚಿನ ದರದಲ್ಲಿ ಬಡ್ಡಿ ನೀಡುವುದಾಗಿ ಹೇಳಿ ದೇಶಾದ್ಯಂತ ಕೋಟ್ಯಂತರ ರೂಪಾಯಿ ವಂಚಿಸಿ ಸದ್ಯ ಬಂಧನದಲ್ಲಿರುವ ಎಂಇಪಿ ಪಕ್ಷದ ಸ್ಥಾಪಕಿ ನೌಹಿರಾ ಶೇಖ್ ಅವರನ್ನು ಪಾರು ಮಾಡಲು ಜನರ್ದಾನ ರೆಡ್ಡಿ ಪ್ರಯತ್ನಿಸಿದ್ದರು ಎನ್ನುವ ಗಂಭೀರ ಆರೋಪವೊಂದು ಈಗ ಕೇಳಿ ಬಂದಿದೆ.

ಆಲ್‍ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಾರ್ಟಿ (ಎಂಇಪಿ) ಪಕ್ಷದ ಮುಖ್ಯಸ್ಥೆ ನೌಹೀರಾ ಶೇಖ್ ತೆಲಂಗಾಣದಲ್ಲಿ ಬಂಧನಕ್ಕೆ ಒಳಗಾಗಿದ್ದು, ಈ ಪ್ರಕರಣದಿಂದ ಅವರನ್ನು ರಕ್ಷಿಸಲು ರೆಡ್ಡಿ ಸಹಾಯ ಮಾಡುವುದಾಗಿ ಹಣ ಪಡೆದಿದ್ದರು ಎನ್ನುವ ಆರೋಪ ಈಗ ಕೇಳಿಬಂದಿದೆ.
ನೌಹಿರಾ ಶೇಖ್ ದೇಶದ ಪ್ರಮುಖ ನಗರಗಳಲ್ಲಿ ಬಂಡಾವಳ ಹೂಡಿಕೆ ಮಾಡುವ ಹೆಸರಿನಲ್ಲಿ ಜನರಿಂದ ಕೋಟಿ ಕೋಟಿ ರೂ. ಹಣ ಪಡೆದ ಆರೋಪ ಎದುರಿಸುತ್ತಾರೆ. ಈಗಾಗಲೇ ಮುಂಬೈ ಪೊಲೀಸರು ಬಾಡಿ ವಾರೆಂಟ್ ಪಡೆದು ನೌಹಿರಾ ಶೇಖ್ ವಿಚಾರಣೆಗೆ ಒಳಪಡಿಸಿದ್ದಾರೆ. 
Image result for JANARDANA REDDY AND NOUHEERA SHEIK

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ತನ್ನನ್ನು ಪಾರು ಮಾಡುವಂತೆ ನೌಹಿರಾ ಶೇಖ್ ಗಾಲಿ ಜನಾರ್ದನ ರೆಡ್ಡಿ ಅವರ ಸಹಾಯಕೋರಿದ್ದರು. ನೌಹಿರಾ ಶೇಖ್ ಅವರಿಗೆ ಸಹಾಯ ಮಾಡುವ ಭರವಸೆ ನೀಡಿದ್ದ ರೆಡ್ಡಿ ಕೋಟಿ ಕೋಟಿ ಹಣ ಪಡೆದಿದ್ದರು ಎನ್ನಲಾಗಿದೆ. ರೆಡ್ಡಿ ಅವರ ಆಪ್ತರ ಬ್ಯಾಂಕ್ ಖಾತೆಗೆ ಈ ಹಣ ಸಂದಾಯವಾಗಿದೆ ಎಂಬ ಮಾಹಿತಿಯೂ ಈಗ ಲಭ್ಯವಾಗಿದೆ. ಸದ್ಯ ರೆಡ್ಡಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಳುಕು ಹಾಕಿಕೊಂಡಿರುವ ಆಂಬಿಡೆಂಟ್ ಕಂಪನಿ ಮಾಲೀಕ ಫರೀದ್ ಮೂಲಕ ಸಹಾಯ ಮಾಡಲು ಜನಾರ್ದನ ರೆಡ್ಡಿ ಮುಂದಾಗಿದ್ದರು ಎನ್ನಲಾಗಿದೆ.

Pages