SSF ಸಂಘಟನೆ ಜೋಕಟ್ಟೆ ಶಾಖೆ ಹಮ್ಮಿಕೊಂಡಿದ಼ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ದಕ್ಷಿಣ ಕನ್ನಡ ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಯವರು ,
ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆ ,ಜಾತ್ಯಾತೀತತೆ, ಸಂವಿಧಾನ ಅಪಾಯದಲ್ಲಿರುವ ಮತ್ತು ಮುಸಲ್ಮಾನರ ಅಸ್ತಿತ್ವ ಪ್ರಶ್ನಾರ್ಹವಾಗಿರುವ ಈ ಸಂದರ್ಭದಲ್ಲಿ ಸಂಘಟನಾತ್ಮಕ ಸೈಧಾಂತಿಕ ಭಿನ್ನತೆ ಬದಿಗಿರಿಸಿ ಮುಸ್ಲಿಂ ಉಮೃತ್ ನೆಲೆಯಲ್ಲಿ ಐಕ್ಯರಾಗಿ ಹೋರಾಡಬೇಕು ಎಂದು ಕರೆ ನೀಡಿದರು.
"ತಾವು ಸೀಸ ಹೊಯ್ದ ಗೋಡೆಗಳೆಂಬಂತೆ ಸಾಲಾಗಿ (ಸಂಘಟಿತರಾಗಿ) ತನ್ನ ಮಾರ್ಗದಲ್ಲಿ ಹೋರಾಡುವವರನ್ನು ಅಲ್ಲಾಹನು ಖಂಡಿತ ಪ್ರೀತಿಸುತ್ತಾನೆ."
ಎಂಬ ಪವಿತ್ರ ಕುರ್ ಆನ್ ಸಂದೇಶವನ್ನು ನೀಡಿದರು.
ಅದರೊಂದಿಗೆ ಎಸ್ ಎಸ್ ಎಫ್ ಅಭಿಯಾನದ ಸಂದೇಶವು ಬಹಳಷ್ಟು ಇಷ್ಟವಾಯಿತು.ಅದನ್ನೆ ಪ್ರಸ್ತುತಪಡಿಸಿ ಮಾತು ಕೊನೆಗೊಳಿಸಿದರು.
