ಯಶಸ್ವಿಯಾಗಿ ಒಂಬತ್ತು ವರ್ಷಗಳನ್ನು ಪೂರೈಸಿ 10ನೇ ವರ್ಷಕ್ಕೆ ಕಾಲಿಟ್ಟ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಇಂದು ದೇಶವ್ಯಾಪಿಯಾಗಿ ಕ್ಯಾಂಪಸ್ ಫ್ರಂಟ್ ಡೇ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು ಇದರ ಅಂಗವಾಗಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಪುಂಜಾಲಕಟ್ಟೆಯಲ್ಲಿ ಧ್ವಜಾರೋಹಣ ಹಾಗೂ ಸಾರ್ವಜನಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಧ್ವಜಾರೋಹಣಗೈದು ಸಂದೇಶ ಭಾಷಣ ಮಾಡಿದ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಾಕೀರ್ "ವಿಧ್ಯಾರ್ಥಿಗಳಿಗೆ ವಿದ್ಯೆಯನ್ನು ನೀಡಿ ಉತ್ತಮ ಸಮಾಜ ಕಟ್ಟುವ ವ್ಯಕ್ತಿಗಳನ್ನು ರೂಪಿಸಬೇಕಾದ ವಿದ್ಯಾಸಂಸ್ಥೆಗಳು ಶಿಕ್ಷಣದಲ್ಲಿ ಕೇಸರಿಕರಣ ಮಾಡುತ್ತಿದೆ,ವಿಧ್ಯಾಸಂಸ್ಥೆಗಳಲ್ಲಿ ವಿಧ್ಯಾರ್ಥಿನಿಗಳಿಗೆ ನಿರಂತರ ಶೋಷಣೆಗಳಾಗುತ್ತಿದ್ದು ಇದನ್ನು ಪ್ರತಿಭಟಿಸಬೇಕಾಗಿರುವವರು ಮೌನವಾಗಿದ್ದಾರೆ ಆದರೆ ಕ್ಯಾಂಪಸ್ ಫ್ರಂಟ್ನ ಅಸ್ತಿತ್ವವೇ ವಿಧ್ಯಾರ್ಥಿ ಸಮೂಹದ ಧ್ವನಿಯಾಗುವುದಾಗಿದೆ, ನ್ಯಾಯ ನಿರಾಕರಿಸಲ್ಪಟ್ಟ ವಿಧ್ಯಾರ್ಥಿಗಳಿಗೆ ನ್ಯಾಯವನ್ನೊದಗಿಸಲು ಕ್ಯಾಂಪಸ್ ಫ್ರಂಟ್ನ ಹೋರಾಟ ನಿರಂತರವಾಗಿರುತ್ತದೆ" ಎಂದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ತಾಲೂಕದ್ಯಕ್ಷ ವಝೀರ್ ಪುಂಜಾಲಕಟ್ಟೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪನ್ಯಾಸಕರಾದ ನಿಯಾಝ್ ಪಣಕಾಜೆ, ಕ್ಯಾಂಪಸ್ ಫ್ರಂಟ್ ದ.ಕ ಜಿಲ್ಲಾ ಸಮಿತಿ ಸದಸ್ಯ ತಾಜುದ್ದೀನ್, ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಶಾಹಿದ್ ಆಲಿ, ಸರ್ವ ಕಾಲೇಜು ವಿಧ್ಯಾರ್ಥಿ ಸಂಘ ಬೆಳ್ತಂಗಡಿ ಅಧ್ಯಕ್ಷ ಫಾಝಿಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು
ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ತಾಲೂಕು ಸಮಿತಿ ಸದಸ್ಯ ಇಮ್ರಾನ್ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು.


