✒ಇಲ್ಯಾಸ್ ಮಂಗಳೂರು

ಟ್ರೂ ಮೀಡಿಯಾ ನ್ಯೂಸ್ ನ.25
ದ.ಕ ಜಿಲ್ಲೆಯ ಒಂದು ಪ್ರದೇಶದಲ್ಲಿ ಮದ್ಯಮ ವರ್ಗದ ಕುಟುಂಬದ ಹೆಣ್ಣು ಮಗಳನ್ನು ಸೌದಿಯ ಉದ್ಯೋಗಸ್ಥನಾದ ಒಬ್ಬ ಹುಡುಗನಿಗೆ ಮದುವೆ ಮಾಡಿಕೊಡಲಾಗಿತ್ತು. ಮನೆಯಲ್ಲಿ ಹುಡುಗನ ತಂದೆ, ತಾಯಿ, ತಮ್ಮ ಮತ್ತು ಪತ್ನಿ ಮಾತ್ರ ಇದ್ದಂತ ಪುಟ್ಟ ಕುಟುಂಬ ಅದಾಗಿತ್ತು. ಮದುವೆಯಾಗಿ ಸುಮಾರು ಮೂರು ತಿಂಗಳು ಕಳೆದ ನಂತರ ಹುಡುಗ ಉದ್ಯೋಗ ನಿಮಿತ್ತ ಸೌದಿಗೆ ತೆರಳುತ್ತಾನೆ. ತನ್ನ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ತನ್ನ ಕುಟುಂಬದ ಜೀವನ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತು ವಿದೇಶಕ್ಕೆ ತೆರಳಿದ ಹುಡುಗ ಒಂದು ಕಡೆಯಾದರೆ ತಾನು ಮದುವೆಯಾಗಿ ಬಂದ ಮನೆಯನ್ನು ಬೆಳಗಿ ತನ್ನ ಮನೆಯವರಿಂದ ಹಾಗೂ ಗಂಡನಿಂದ ಸೈ ಅನಿಸಿಕೊಳ್ಳಬೇಕು ಎಂದು ಕನಸನು ಕಾಣುತ್ತಿದ್ದ ಮದುಮಗಳು ಇನ್ನೊಂದು ಕಡೆ. ಆದರೆ ತಮ್ಮ ಎಲ್ಲಾ ಆಸೆ ಆಕಾಂಕ್ಷೆಗಳನ್ನು ನುಚ್ಚು ನೂರು ಮಾಡುವ ಒಬ್ಬ ಕಿರಾತಕನೊಬ್ಬನು ಇದೇ ಪುಟ್ಟ ಕುಟುಂಬದಲ್ಲಿ ಇದ್ದಾನೆ ಎಂಬುದು ಇಬ್ಬರಿಗೂ ತಿಳಿದಿರಲಿಲ್ಲ. ಏನು ಮಾಡುವುದು ವಿಧಿಯೇ ಹಾಗೆ ಯಾವ ಹುತ್ತದಲ್ಲಿ ಹಾವು ಇರುತ್ತದೆ ಎಂದು ಯಾರಿಗೂ ತಿಳಿದಿರುವುದಿಲ್ಲ. ಮನೆಯಲ್ಲಿದ್ದ ಸ್ವಂತ ಮಾವನೇ ತನ್ನ ಮಗಳಿಗೆ ಸಮನಾದ ಸೊಸೆಯ ಮೇಲೆ ಒಂದು ಕಾಮದ ಕಣ್ಣಿಟ್ಟಿರುತ್ತಾನೆ. ಸೊಸೆಯನ್ನು ಕದ್ದು ಮುಚ್ಚಿ ಕಾಮ ದೃಷ್ಟಿಯಲ್ಲಿ ನೋಡುವುದು ಮೈ ಮುಟ್ಟುವುದು ಮಾಡುತ್ತಿದ್ದನು. ಇದನ್ನು ಸೊಸೆ ಪ್ರತಿಭಟಿಸುತ್ತಿದ್ದರೂ ಕೂಡ ಯಾರಿಗೂ ಹೇಳುವ ಪರಿಸ್ಥಿತಿಯಲ್ಲಿರಲಿಲ್ಲ. ಹೇಳಿದರೂ ಯಾರೂ ನಂಬುವ ಸ್ಥಿತಿಯಲ್ಲಿ ಇರಲಿಲ್ಲ.
ದಿನ ಕಳೆದಂತೆ ಒಂದು ದಿನ ಹುಡುಗನ ತಾಯಿಗೆ ಆರೋಗ್ಯದಲ್ಲಿ ಏರು ಪೇರಾಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಹುಡುಗನ ತಂದೆ ರಾತ್ರಿಯಿಂದ ಬೆಳಿಗ್ಗೆ ವರೆಗೂ ಆಸ್ಪತ್ರೆಯಲ್ಲಿ ಇದ್ದು ಬೆಳಿಗ್ಗೆ ಸಣ್ಣ ಮಗ ಆಸ್ಪತ್ರೆಗೆ ಬಂದ ತಕ್ಷಣ ತಂದೆ ಮನೆಗೆ ತೆರಳುತ್ತಾರೆ. ಇತ್ತ ಮನೆಯಲ್ಲಿ ಸೊಸೆ ಒಬ್ಬಳೇ ಇದ್ದುದರ ಲಾಭ ಪಡೆಯಲು ಮುಂದಾದ ಮಾವ ಕಾಮ ಕ್ರೀಡೆಗಾಗಿ ಸ್ವಂತ ಮಗಳಿಗೆ ಸಮನಾದ ಸೊಸೆಯನ್ನು ಬಲವಂತ ಪಡಿಸುತ್ತಾರೆ. ಅದಕ್ಕೆ ಒಪ್ಬಪದಿದ್ದಾಗ ಮನೆಯ ಬಾಗಿಲನ್ನು ಭದ್ರ ಪಡಿಸಿ ಬಲಪ್ರಯೋಗ ಮಾಡಿ ಸ್ವಂತ ಸೊಸೆಯ ಮೇಲೆಯೇ ಅತ್ಯಾಚಾರ ಮಾಡುತ್ತಾನೆ.
ತನ್ನೆಲ್ಲಾ ಕನಸುಗಳು ನುಚ್ಚು ನೂರಾದ ಅನುಭವದೊಂದಿಗೆ ಆಕಾಶವೇ ಕಳಚಿಬಿದ್ದ ಹಾಗಾಗಿ ಏನು ಮಾಡಬೇಕೆಂದು ತೋಚದೆ ಕಕ್ಕಾಬಿಕ್ಕಿ ಯಾದ ಸೊಸೆ ಕೊನೆಗೂ ಈ ಕೆಟ್ಟ ಅನುಭವವನ್ನು ತನ್ನ ತವರು ಮನೆಯವರಿಗೆ ತಿಳಿಸುತ್ತಾಳೆ. ಕೂಡಲೇ ಹುಡುಗಿಯ ಮನೆಯವರು ಈ ಘಟನೆಯನ್ನು ಪೋಲೀಸರಿಗೆ ತಿಳಿಸಿದರೆ ಇನ್ನಷ್ಟು ತೊಂದರೆಯಾಗ ಬಹುದೆಂದು ಭಯದಿಂದ ಸ್ಥಳೀಯ
ಮಸೀದಿಯ ಆಡಳಿತ ಸಮಿತಿಗೆ ವಿಷಯ ತಿಳಿಸುತ್ತಾರೆ. ನಂತರ ಈ ವಿಚಾರವು ಕಾಡ್ಗಿಚ್ಚಿನಂತೆ ಹರಡಿ ಊರಿಗೆ ಊರೇ ಮಾತನಾಡಲು ಪ್ರಾರಂಭವಾದಾಗ ಮಸೀದಿ ಮುಖಂಡರು ಮತ್ತು ಊರಿನ ಹಿರಿಯರು ಸಭೆ ಸೇರಿ ರಾಜಿ ಪಂಚಾಯತ್ ಮೂಲಕ ಇತ್ಯರ್ಥ ಪಡಿಸುವ ತೀರ್ಮಾನಕ್ಕೆ ಬಂದು ಸೌದಿಯಲ್ಲಿದ್ದ ಹುಡುಗನಿಗೆ ವಿಷಯ ತಲುಪಿಸುತ್ತಾರೆ. ಆ ಸಂದರ್ಭದಲ್ಲಿ ತನ್ನ ತಂದೆ ಮಾಡಿದ ತಪ್ಪನ್ನು ತಿಳಿದು ಸಮಾಧಾನ ದಿಂದ ಯೋಚಿಸಿ ಒಂದು ನಿರ್ಧಾರಕ್ಕೆ ಬರುವ ಬದಲು ಅವನು ಏಕಾಏಕಿಯಾಗಿ ಪತ್ನಿಯನ್ನು ತ್ಯಜಿಸುವ ತೀರ್ಮಾನಕ್ಕೆ ಬರುತ್ತಾನೆ. ನಂತರ ಯಾರು ಪ್ರಯತ್ನ ಪಟ್ಟರು ಕೂಡ ಅವನು ಅರ್ಥೈಸಿಕೊಳ್ಳುವ ಪರಿಸ್ಥಿತಿಯಲ್ಲಿ ಇರಲಿಲ್ಲ ಕೊನೆಗೆ ಫೋನ್ ಸ್ವಿಚ್ ಆಫ್ ಮಾಡಿ ಸಂಪರ್ಕ ಕಡಿತಗೊಳಿಸುತ್ತಾನೆ. ಹುಡುಗಿಯ ಮನೆಯವರ ಪಂಚಾಯತುದಾರರ ಸತತ ಪ್ರಯತ್ನದ ನಂತರ ಸಂಪರ್ಕಕ್ಕೆ ಬಂದ ಹುಡುಗನ ಬಳಿ ಮಸೀದಿಯ ಮುಖ್ಯಸ್ಥರು ಕೊನೆಯ ನಿರ್ಧಾರವನ್ನು ಕೇಳಿದಾಗ ನಾನು ತಲಾಕ್ ನೀಡುತ್ತೇನೆ ಒಂದು ವೇಳೆ ನೀವು ಬಲವಂತ ಮಾಡುವುದಾದರೆ ನಾನು ಊರಿಗೆ ಬರುವುದಿಲ್ಲ ಎಂದು ಹೇಳಿ ಫೋನ್ ಕಟ್ ಮಾಡುತ್ತಾನೆ. ಹುಡುಗನ ಅಭಿಪ್ರಾಯದ ನಂತರ ಪಂಚಾಯತ್ ದಾರರು ಹುಡುಗನಿಂದ ತಲಾಖ್ ನೀಡಿಸಿ ಅತ್ಯಾಚಾರ ಮಾಡಿದ ಮಾವನ ಜೊತೆ ಮದುವೆ ಮಾಡಿಸಲು ತೀರ್ಮಾನ ತೆಗೆದು ಕೊಳ್ಳಲಾಗುತ್ತದೆ. ತನ್ನನ್ನು ಅತ್ಯಾಚಾರ ಮಾಡಿದ ಪಾಪಿಯ ಜೊತೆಗೆ ಮದುವೆಯಾಗಿ ಸಂಸಾರ ನಡೆಸುವ ಈ ದುರ್ವಿಧಿಯನ್ನು ನನೆದು ಆ ಹುಡುಗಿಯು ಅತ್ಯಾಚಾರಿ ಮಾವನನ್ನು ಮದುವೆಯಾಗಲು ಒಪ್ಪದೆ ತನ್ನ ಗಂಡನಿಂದ ವಿಚ್ಛೇದನೆ ಪಡೆದು ಪುನಃ ತವರು ಮನೆ ಸೇರುತ್ತಾಳೆ.
ಇಲ್ಲಿ ಉದ್ಭವವಾಗುವ ಪ್ರಶ್ನೆಗಳೇನೆಂದರೆ ನಿಜವಾಗಿಯೂ ಇಲ್ಲಿ ತಪ್ಪು ಮಾಡಿದವರು ಯಾರು? ಅತ್ಯಾಚಾರ ಮಾಡಿದ ಮಾವನೋ ? ಕಾಮುಕ ಮಾವನ ಮೊದಲ ಕಾಮ ಚೇಷ್ಟೆಯನ್ನು ಮರ್ಯಾದೆಗೆ ಹೆದರಿ ಸಹಿಸಿದ ಸೊಸೆಯದ್ದೋ ? ಅಥವಾ ಏಕಾಏಕಿ ತಲಾಖ್ ನ ನಿರ್ಧಾರ ಕೈಗೊಂಡ ಹುಡುಗನದ್ದೋ ? ಮಾವನನ್ನು ಜೈಲಿಗಟ್ಟುವಂತೆ ಮಾಡದೆ ಸೊಸೆಯನ್ನೇ ಮದುವೆಯಾಗುವಂತೆ ತೀರ್ಪು ಕೊಟ್ಟ ಪಂಚಾಯತ್ ದಾರರದ್ದೋ ?
ಒಂದು ಘೋರವಾದ ತಪ್ಪು ಮಾಡಿದ ವ್ಯಕ್ತಿಯನ್ನು ಶಿಕ್ಷೆಯಿಂದ ತಪ್ಪಿಸಿ ನೀಡಿದ ತೀರ್ಪು ಎಷ್ಟು ಸಮಂಜಸ ? ಇಂತಹ ಘಟನೆಗಳಲ್ಲಿ ಕಾಮುಕರಿಗೆ ಗರಿಷ್ಠ ಪ್ರಮಾಣದ ಶಿಕ್ಷೆಯನ್ನು ಘೋಷಿಸುವ ಮತ್ತು ಸಂತ್ರಸ್ತೆಯ ಮುಂದಿನ ಜೀವನಕ್ಕೆ ಆಸರೆಯಾಗುವ ರೀತಿಯಲ್ಲಿ ಪರಿಹಾರ ಒದಗಿಸುವ ಒಂದು ವ್ಯವಸ್ಥೆ ನಮ್ಮ ಸಮುದಾಯದಲ್ಲಿ ಉಂಟಾಗ ಬೇಕಾಗಿದೆ.