ಕಮ್ಮಾಡಿ ಹಾಜಿ ಕುಟುಂಬದಿಂದ ಪುತ್ತೂರಿಗೆ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ - News Ubaar

ಇತ್ತೀಚಿನ ಸುದ್ದಿ

Subscribe

ಶನಿವಾರ, ನವೆಂಬರ್ 17, 2018

ಕಮ್ಮಾಡಿ ಹಾಜಿ ಕುಟುಂಬದಿಂದ ಪುತ್ತೂರಿಗೆ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ


 ನ್ಯೂಸ್ ಉಬಾರ್ ,ನ.17 /2018:
ಕಮ್ಮಾಡಿ ಇಬ್ರಾಹಿಂ ಹಾಜಿಯವರ ನೇತೃತ್ವದಲ್ಲಿ ಪುತ್ತೂರಿನಲ್ಲಿ ಎಲ್ಲಾ ವರ್ಗದ ಜನರಿಗೆ ಅನುಕೂಲಕರವಾಗುವ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯನ್ನು ನಿರ್ಮಿಸುತ್ತಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ. ಪುತ್ತೂರಿನಲ್ಲಿ ಮುಸ್ಲಿಮ್ ಸಮುದಾಯದ ಕೊಡುಗೆಯಾಗಿ ಇದು ಮೊತ್ತ ಮೊದಲ ಆಸ್ಪತ್ರೆಯಾಗಿದ್ದು ಕಮ್ಮಾಡಿ ಕುಟುಂಬದ ಆಡಳಿತದಲ್ಲಿ ಜನರ ಆರೋಗ್ಯ ಸೇವೆಗೆ ಶೀಘ್ರವೇ ಇದು ಕಾರ್ಯಾರಂಭಗೊಳ್ಳಲಿದೆ.

ಬಡವರಿಗೆ, ಮಧ್ಯಮ ವರ್ಗದವರಿಗೆ ಮತ್ತು ಎಲ್ಲಾ ವರ್ಗದ ಜನರಿಗೆ ಪ್ರಯೋಜನವಾಗುವಂತೆ ಆಸ್ಪತ್ರೆಯು ಕಾರ್ಯಾಚರಿಸಲಿದ್ದು ಅತ್ಯಂತ ನುರಿತ ವೈಧ್ಯರನ್ನು ಹೊಂದಲಿದೆ. ಕಳೆದ ಹಲವಾರು ವರ್ಷದಿಂದ ಪುತ್ತೂರಿನ ಮುಸ್ಲಿಮ್ ಸಮುದಾಯದಲ್ಲಿ ಒಂದು ಆಸ್ಪತ್ರೆಯ ನಿರ್ಮಾಣ ಆಗಬೇಕು ಎಂಬ ಬಹು ದಿನದ ಕನಸನ್ನು ಕಮ್ಮಾಡಿ ಇಬ್ರಾಹಿಂ ಹಾಜಿ ಮತ್ತು ಅವರ ಮಕ್ಕಳು ಈ ಮೂಲಕ ನನಸು ಮಾಡಿದ್ದಾರೆ.

Pages