
ಟ್ರೂ ಮೀಡಿಯಾ ನ್ಯೂಸ್,ನ 12
ಅಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಎಸ್ ಇ ಡಿ ಸಿ ಕ್ರಿಸ್ಟಲ್ ಜುಬಿಲಿ ಸಮ್ಮೇಳನದಲ್ಲಿ ಮೈದಾನ ಪೂರ್ತಿಯಾಗಿ ತುಂಬಿಕೊಂಡಿದ್ದ ಜನ ಸಾಗರದ ಮುಂದೆ ಮುಖ್ಯ ಅತಿಥಿಯಾಗಿದ್ದ ಹೆಚ್.ಡಿ ಕುಮಾರಸ್ವಾಮಿ ಅವರು "ನಾಸಿರ್ ಮ'ಅದನಿ ಉಸ್ತಾದರ ಪರವಾಗಿ ಸರಕಾರದೊಂದಿಗೆ ಚರ್ಚಿಸುತ್ತೇನೆ" ಎಂದು ಶಾಫಿ ಸಅದಿಗೆ ಮಾತುಕೊಟ್ಟಿದ್ದರು.
ಇದಾದ ಮೇಲೆ ಕುಮಾರಸ್ವಾಮಿ ಅವರು ಸರಕಾರದೊಂದಿಗೆ ಈ ವಿಷಯವಾಗಿ ಚರ್ಚಿಸಿದ ವಿಷಯ ಯಾವುದೇ ಮಾಧ್ಯಮಗಳಲ್ಲಿ ಕಾಣಲಿಲ್ಲ. ಆ ಭಾಷಣ ಮುಗಿದ ಮೇಲೆ ಅವರು ಸರಕಾರದೊಂದಿಗೆ ಚರ್ಚಿಸಲು ಮರೆತಿರಲೂಬಹುದು. ಕ್ರಮೇಣ ನಾವು ಕೂಡ ಮರೆತೆವು.
ನಿಜವಾಗಿಯೂ ನಾಸಿರ್ ಮ'ಅದನಿ ಉಸ್ತಾದರ ಬಿಡುಗಡೆಗಾಗಿ ಏನಾದರೂ ಕ್ರಮ ತೆಗೆದುಕೊಳ್ಳಬೇಕೆಂಬ ಆಗ್ರಹ ಕುಮಾರಸ್ವಾಮಿ ಅವರಿಗೆ ಇದ್ದುಕೊಂಡೇ ಅಂದು ಈ ರೀತಿ ಮಾತುಕೊಟ್ಟಿದ್ದೇ ಆದರೆ ದಯವಿಟ್ಟು ಈಗ ಶ್ರಮಿಸಬಹುದಲ್ಲವೇ?
ಯಾಕೆಂದರೆ ಇಂದು ಕುಮಾರಸ್ವಾಮಿ ಅವರದ್ದೇ ಸರಕಾರ ಇದೆ, ಆ ಸಮ್ಮೇಳನದಲ್ಲಿ ಮಾಜಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಇಂದು "ಮುಖ್ಯಮಂತ್ರಿ" ಸ್ಥಾನವನ್ನು ಅಲಂಕರಿಸಿಕೊಂಡಿದ್ದಾರೆ.
ಸನ್ಮಾನ್ಯ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ ತಾನು ಕೊಟ್ಟ ಮಾತು ಮತ್ತೆ ನೆನಪಾಗಿ ನಾಸಿರ್ ಮ'ಅದನಿ ಉಸ್ತಾದರ ಬಿಡುಗಡೆಗೆ ಶ್ರಮಿಸುತ್ತಾರ.!
✒ ಎಸ್ಸಾರ್ಜೆ ಮಾಡನ್ನೂರ್