ರಾಫೆಲ್ ಹಗರಣ : NDTV ಚಾನೆಲ್ ವಿರುದ್ಧ ರೂ.10,000 ಕೋಟಿಯ ಮಾನನಷ್ಟ ಮೊಕದ್ದಮೆ ದಾಖಲಿಸಿದ ರಿಲಾಯನ್ಸ್! - News Ubaar

ಇತ್ತೀಚಿನ ಸುದ್ದಿ

Subscribe

ಶುಕ್ರವಾರ, ಅಕ್ಟೋಬರ್ 19, 2018

ರಾಫೆಲ್ ಹಗರಣ : NDTV ಚಾನೆಲ್ ವಿರುದ್ಧ ರೂ.10,000 ಕೋಟಿಯ ಮಾನನಷ್ಟ ಮೊಕದ್ದಮೆ ದಾಖಲಿಸಿದ ರಿಲಾಯನ್ಸ್!



ಟ್ರೂಮೀಡಿಯಾ ನ್ಯೂಸ್ ,ಅ19:
ದೇಶದ ಇತಿಹಾಸದಲ್ಲೇ ಅತೀ ದೊಡ್ಡ ಹಗರಣ ಎಂದೇ ಕರೆಯಲ್ಪಡುತ್ತಿರುವ ರಾಫೇಲ್ ಹಗರಣದ ಸುತ್ತ ಅನಿಲ್ ಅಂಬಾನಿ ನೇತೃತ್ವದ ರಿಲಾಯನ್ಸ್ ಕಂಪೆನಿಯ ಕೈಚಳಕದ ಬಗ್ಗೆ ಈಗಾಗಲೇ ಆರೋಪಗಳು ಕೇಳಿ ಬರುತ್ತಿವೆ.

ಇದೀಗ ರಾಫೇಲ್ ಬಗ್ಗೆ ನಿಷ್ಪಕ್ಷ ವರದಿ ಮಾಡಿದ್ದಕ್ಕಾಗಿ ಅನಿಲ್ ಅಂಬಾನಿಯ ರಿಲಾಯನ್ಸ್ ದೇಶದ ಪ್ರಮುಖ ಟಿವಿ ಚಾನೆಲ್ ಎನ್ಡಿಟಿವಿ ವಿರುದ್ಧ ಅಹ್ಮದಾಬಾದಿನ ನ್ಯಾಯಾಲಯದಲ್ಲಿ ರೂ.10,000 ಕೋಟಿಯ ಮೊಕದ್ದಮೆ ದಾಖಲಿಸಿದೆ.


 
ಈ ಬಗ್ಗೆ ಟ್ವೀಟ್ ಮಾಡಿದ ಎನ್ಡಿಟಿವಿ ಮುಖ್ಯಸ್ಥೆ ಸುಪರ್ಣಾ ಸಿಂಗ್, ಮಾಧ್ಯಮವನ್ನು ಹದ್ದುಬಸ್ತಿನಲ್ಲಿಡಲು ನಡೆಯುತ್ತಿರುವ ಈ ಪ್ರಯತ್ನದ ವಿರುದ್ಧ ಹೋರಾಡುವುದಾಗಿ ತಿಳಿಸಿದ್ದಾರೆ. ರಿಲಾಯನ್ಸ್ ನಡೆಯ ವಿರುದ್ಧ ಕಿಡಿಕಾರಿದ ಮಾಧ್ಯಮ ದಿಗ್ಗಜರು ಎನ್ಡಿಟಿವಿಗೆ ಬೆಂಬಲ ಸೂಚಿಸಿದ್ದಾರೆ.

ವಿದೇಶೀ ಹೂಡಿಕೆಯ ನಿಯಮಗಳನ್ನು ಉಲ್ಲಂಘಿಸಿಲಾಗಿದೆ ಎಂದು ಜಾರಿ ನಿರ್ದೇಶನಾಲಯವು ಎನ್ಡಿಟಿವಿಗೆ ಶೋಕಾಸ್ ನೋಟೀಸ್ ಕಳುಹಿಸಿದ್ದನ್ನೂ ಇಲ್ಲಿ ನೆನಪಿಸಬಹುದು. ಒಟ್ಟಿನಲ್ಲಿ, ಅಧಿಕಾರದಲ್ಲಿರುವವರ ಮೂಗಿನ ನೇರಕ್ಕೆ ವರದಿ ಪ್ರಕಟಗೊಳ್ಳದಾಗ ಬೆದರಿಸಿ ಕುಗ್ಗಿಸುವ ತಂತ್ರವೇ ಎಂಬ ಸಂಶಯ ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕನ ಮನಸ್ಸಿನಲ್ಲಿದೆ.

Pages