ದೆಹಲಿ: ರಾಷ್ಟ್ರೀಯ ತನಿಖಾ ದಳವು (NIA) ದೇಶದಲ್ಲಿ ಸಂಘಪರಿವಾರ ಪ್ರಾಯೋಜಿತ 'ಲವ್ ಜಿಹಾದ್" ಎಂಬ ಕಟ್ಟುಕಥೆಯನ್ನಾದರಿಸಿ ನಡೆದಿದ್ದ ಅಪಪ್ರಚಾರದ ಕುರಿತಂತೆ ನಡೆಸಿದ ತನಿಖೆಯಲ್ಲಿ ಕೊನೆಗೆ ಇಂತಹಾ ಒಂದು ಪ್ರಯತ್ನ ದೇಶದಲ್ಲಿ ನಡೆದಿಲ್ಲ ಎಂದು ಹೇಳಿದೆ. ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರವಾಗಲು ಕೆಲವೊಬ್ಬರು ಸಹಾಯ ಮಾಡಿರಬಹುದೇ ವಿನಃ ಅಲ್ಲಿ ಯಾವುದೇ ಕ್ರಿಮಿನಲ್ ಷಡ್ಯಂತ್ರಗಳು ನಡೆದಿರುವ ಕುರಿತು ಪುರಾವೆ ಲಭಿಸಿಲ್ಲ ಎಂದು ಎನ್‍ಐಎ ಹೇಳಿದೆ. "ಯಾವುದೇ ಮಹಿಳೆಯಾಗಲೀ ಪುರುಷನಾಗಲೀ ಮತಾಂತರವಾಗಲು ಯಾರದ್ದೇ ಒತ್ತಡಗಳು ನಡೆದಿದ್ದರ ಬಗ್ಗೆ ಪುರಾವೆ ನಮಗೆ ಸಿಗಲಿಲ್ಲ. ನಮ್ಮ ಮಟ್ಟಿಗೆ ಇದೊಂದು ಮುಗಿದ ಅಧ್ಯಾಯವಾಗಿದ್ದು, ಈ ಕುರಿತಂತೆ ಸುಪ್ರೀಮ್ ಕೋರ್ಟಿಗೆ ಯಾವುದೇ ವರದಿ ಸಲ್ಲಿಸುವುದಿಲ್ಲ" ಎಂದು ಎನ್‍ಐಎ ಹಿರಿಯ ಅಧಿಕಾರಿ ಹೇಳಿದ್ದಾರೆ.
ಎನ್‍ಐಎ ತಮ್ಮ ಆರೋಪಗಳನ್ನು ಸಾಬೀತುಪಡಿಸುವ ಪ್ರಯತ್ನದ ಭಾಗವಾಗಿ ಒಟ್ಟು 89 ಅಂತಧರ್ಮೀಯ ಪ್ರಕರಣಗಳನ್ನು ಪರೀಕ್ಷಿಸಿ ಅವುಗಳಲ್ಲಿ 11 ಪ್ರಕರಣಗಳನ್ನು ತಮ್ಮ ತನಿಖೆಯಲ್ಲಿ ಸೇರಿಸಿತ್ತು. ಆದರೆ ಯಾವುದೇ ಪ್ರಕರಣಗಳಲ್ಲೂ ಕೂಡಾ ಬಲವಂತದ ಮತಾಂತರ, ಸಂಘಟಿತ ಮತಾಂತರಗಳು ನಡೆದ ಬಗ್ಗೆ ಪುರಾವೆಯೇ ಇಲ್ಲ ಎಂದು ಎನ್‍ಐಎ ಹೇಳಿದ್ದು ಲವ್ ಜಿಹಾದ್ ಎಂದು ಸಂಘಪರಿವಾರದ ಕಟ್ಟುಕಥೆ, ರಾಜಕೀಯಕ್ಕಾಗಿ ಸಮಾಜದಲ್ಲಿ ದ್ವೇಷ ಹುಟ್ಟುಹಾಕುವ ಅಜೆಂಡಾವನ್ನು ಕೊನೆಗೊಳಿಸಿದೆ.
ಕಳೆದ ಹಲವಾರು ವರ್ಷಗಳಿಂದ ಬಿಜೆಪಿ, ಸಂಘಪರಿವಾರ ಮತ್ತು ಕೆಲವೊಂದು ಮಾಧ್ಯಮಗಳು ಲವ್ ಜಿಹಾದ್ ನ ಹೆಸರಿನಲ್ಲಿ ಅಪಪ್ರಚಾರವನ್ನು ನಡೆಸುತ್ತಾ ಬಂದಿದ್ದು ಒಂದು ಸಮುದಾಯದ ಮೇಲೆ ಸಂಶಯ ಪಡುವಂತಹ ಮತ್ತು ದ್ವೇಷ ಕಲ್ಪಿಸುವಂತಹ ವಾತಾವರಣವನ್ನು ನಿರ್ಮಾಣ ಮಾಡಿತ್ತು. ಹಾದಿಯಾ ಮತ್ತು ಶಫಿನ್ ಜಹಾನ್ ರವರ ವಿವಾಹಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪನ್ನು ಪ್ರಕಟಿಸಿತ್ತು. ಆ ತೀರ್ಪಿನ ಪ್ರಕಾರ ಹಾದಿಯಾ ಸ್ವತಂತ್ರಳಾಗಿದ್ದು ಯಾವುದೇ ಧರ್ಮವನ್ನು ಸ್ವೀಕರಿಸುವ ಮತ್ತು ಬದುಕುವ ಸ್ವಾತಂತ್ರ್ಯವಿದೆ ಎಂದು ತೀರ್ಪು ನೀಡಿತ್ತು. ಈ ಸಂದರ್ಭದಲ್ಲಿ ಎನ್‍ಐಎ 'ಬಲವಂತದ ಮತಾಂತರ ಇದರ ಹಿಂದೆದೆ' ಎಂದು ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಿ ಸುಪ್ರೀಂ ಕೋರ್ಟ್ ಲವ್ ಜಿಹಾದ್‍ನ ಬಲವಂತದ ಮತಾಂತರದ ಬಗ್ಗೆ ತನಿಖೆ ನಡೆಸುವಂತೆ ಮತ್ತು ಸತ್ಯಾಸತ್ಯತೆ ಬಹಿರಂಗಪಡಿಸುವಂತೆ ನಿರ್ದೇಶಿಸಿತ್ತು. ಅ ಬಳಿಕ ತನಿಖೆಯನ್ನು ಕೈಗೊಂಡಿದ್ದ ಎನ್‍ಐಎ ಯಾವುದೇ ಅಂತಹ ಪುರಾವೆಗಳಿಲ್ಲದೆ ತನಿಖೆಯನ್ನು ಅಂತಿಮಗೊಳಿಸಿ ರಾಜಕೀಯ ಲಾಭಕ್ಕಾಗಿ ಸಂಘಪರಿವಾರ ಹೆಣೆದ ಕಾಲ್ಪನಿಕ ಹೆಸರು ಎಂಬುವುದನ್ನು ಸ್ಪಷ್ಟಪಡಿಸಿದೆ.
ಸಮಾಜದಲ್ಲಿ ಸುಳ್ಳು ಪ್ರಚಾರದ ಮೂಲಕ ರಾಜಕೀಯ ಲಾಭವನ್ನು ಪಡೆಯಲು ಪಯತ್ನಿಸುತ್ತಿರುವ ಬಿಜೆಪಿ ಮತ್ತು ಸಂಘಪರಿವಾರ ಈ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯರ ಕ್ಷಮೆಯನ್ನು ಯಾಚಿಸಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್.ಡಿ.ಪಿ.ಐ ಆಗ್ರಹಿಸಿದೆ.
ಹಾಗೂ ಸಂಘಪರಿವಾರದೊಂದಿಗೆ ತೆರೆಮರೆಯಲ್ಲಿ ಕೈಜೋಡಿಸಿ ಸುಳ್ಳು ಸುದ್ದಿಯನ್ನು ಬಿತ್ತರಿಸಿ ಸಮಾಜದಲ್ಲಿ ಅಶಾಂತಿಗೆ ಕಾರಣವಾದ ಕೆಲವೊಂದು ದೃಶ್ಯ, ಪತ್ರಿಕಾ ಮಾಧ್ಯಮಗಳೂ ಜನತೆಯ ಕ್ಷಮೆ ಯಾಚಿಸಬೇಕೆಂದು ಎಸ್.ಡಿ.ಪಿ.ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
