ಟ್ರೂ ಮೀಡಿಯಾ ನ್ಯೂಸ್: ಅ,27
ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಲಿಕ ಎಂಬ ಮುಸ್ಲಿಂ ಮಹಿಳೆಯ ಮೇಲೆ ಅಲ್ಲಿನ ಇನ್ಸ್ಪೆಕ್ಟರ್ ನಡೆಸಿದ ದೈಹಿಕ ಹಲ್ಲೆ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಇನ್ಸ್ಪೆಕ್ಟರ್ ಮೇಲೆ ೩೫೪ ಐ ಪಿ ಸಿ ಸೆಕ್ಷನ್ ಪ್ರಕಾರ ಮಹಿಳಾ ದೌರ್ಜನ್ಯ ಕೇಸು ದಾಖಲಿಸಬೇಕು ಮತ್ತು ತಪ್ಪಿತಸ್ಥ ಇನ್ಸ್ಪೆಕ್ಟರನ್ನು ತನಿಖೆ ಪೂರ್ಣಗೊಳ್ಳುವರೆಗೆ ಸಸ್ಪೆನ್ಡ್ ಮಾಡಬೇಕು ಇಲ್ಲವೇ ರಜೆಯಲ್ಲಿ ಕಲಿಸಬೇಕು ಎಂದು ಒತ್ತಾಯಿಸಿ ಪೊಲೀಸ್ ಕಮಿಷನರ್ ಕಚೇರಿಗೆ ಮುಸ್ಲಿಂ ಸಂಘಟನೆಯ ಪ್ರತಿನಿಧಿಗಳು ಭೇಟಿ ನೀಡಿ ಮನವಿ ಸಲ್ಲಿಸಿದರು.
ನಿಯೋಗದಲ್ಲಿ ಮಾಜಿ ಮೇಯರ್ ಅಶ್ರಫ್ ,SDPI ಅಥಾವುಲ್ಲಾ ಜೋಕಟ್ಟೆ , ನಾಝಿಮ್ HIF , PFI ಹನೀಫ್ ಕಾಟಿಪಳ್ಳ ಸೋಶಿಯಲ್ ಫಾರೂಕ್ ತಲಪಾಡಿ, ಮುಸ್ತಫಾ ಬಂದರ್ ,ಅಲ್ ಹಖ್ ಫೌಂಡೇಶನ್ ನ ಎಂ ಡಿ ಅಶ್ರಫ್ ಮತ್ತು ಇರ್ಫಾನ್ ,ನಜೀರ್ ಅಹ್ಮದ್ ಗುರುಪುರ ಇಕ್ಬಲ್ ಬಜ್ಪೆ ,ಅಡ್ವೋಕೇಟ್ ಹನೀಫ್ ,ಇಸ್ಮಾಯಿಲ್ ಶಾಫಿ ಟಿಪ್ಪು ಸುಲ್ತಾನ್ ವೇದಿಕೆ ,ಮತ್ತು ಜಮಾಲ್ ಜೋಕಟ್ಟೆ ಉಪಸ್ಥಿತರಿದ್ದರು

