ಸಿದ್ದರಾಮಯ್ಯಗೆ ಜನರ ಚಿಂತೆ, ಯಡಿಯೂರಪ್ಪಗೆ ಶೋಭಾ ಚಿಂತೆ: ಸಿ ಎಂ ಇಬ್ರಾಹಿಂ. - News Ubaar

ಇತ್ತೀಚಿನ ಸುದ್ದಿ

Subscribe

ಶನಿವಾರ, ಅಕ್ಟೋಬರ್ 27, 2018

ಸಿದ್ದರಾಮಯ್ಯಗೆ ಜನರ ಚಿಂತೆ, ಯಡಿಯೂರಪ್ಪಗೆ ಶೋಭಾ ಚಿಂತೆ: ಸಿ ಎಂ ಇಬ್ರಾಹಿಂ.



ಟ್ರೂ ಮೀಡಿಯಾ ನ್ಯೂಸ್, ಅ,27: ವಿಕಟ ರಾಜಕಾರಣಿ ಎಂದೇ ಖ್ಯಾತರಾದ ಕಾಂಗ್ರೆಸ್‌ನ ಸಿಎಂ ಇಬ್ರಾಹಿಂ ತಮ್ಮ ವಿಕಟ ಭಾಷಣದಿಂದ ಮತ್ತೆ ಸುದ್ದಿ ಆಗಿದ್ದಾರೆ

ನಿನ್ನೆ ಜಮಖಂಡಿ ಕ್ಷೇತ್ರದಲ್ಲಿ ಉಪಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಅವರು, 'ಸಿದ್ದರಾಮಯ್ಯಗೆ ಜನರ ಚಿಂತೆ ಆದರೆ, ಯಡಿಯೂರಪ್ಪಗೆ ಶೋಭಾ ಕರಂದ್ಲಾಜೆಯದ್ದೇ ಚಿಂತೆ' ಎಂದು ಹೇಳಿದ್ದಾರೆ.

'ಚಕೋರಂಗೆ ಚಂದ್ರಮನ ಚಿಂತೆ, ಅಂಬುಜೆಗೆ ಬಾನುವಿನ ಚಿಂತೆ, ಸಿದ್ದರಾಮಯ್ಯಗೆ ಜನರ ಚಿಂತೆ, ಯಡಿಯೂರಪ್ಪಗೆ ಶೋಭಾ ಚಿಂತೆ' ಎಂದ ಇಬ್ರಾಹಿಂ ತಮ್ಮ ಭಾಷಣದ ಪೂರಾ ವ್ಯಂಗ್ಯದ ಮೂಲಕ ಮೋದಿ ಹಾಗೂ ರಾಜ್ಯ ಬಿಜೆಪಿಯನ್ನು ಕುಟುಕಿದರು.

ಮೋದಿ ತಿಂಗಳಿಗೊಮ್ಮೆ ಮನ್‌ ಕೀ ಬಾತ್‌ ಅಂತಾರೆ, ಆದರೆ ಮನ್‌ ಕೀ ಬಾತ್‌ ಮಾತನಾಡಬೇಕಾದದು, ಹುಡುಗ-ಹುಡುಗಿಯರು, ನೀವು ಜನ್‌ ಕೀ ಬಾತ್‌ ಮಾತಾಡ್ರಿ' ಎಂದು ಮೋದಿ ವಿರುದ್ಧವೂ ತಮ್ಮ ಮಾತಿನ ಬಾಣ ಎಸೆದಿದ್ದಾರೆ.

Pages