“ಜನಾರೋಗ್ಯವೇ ರಾಷ್ಟ್ರ ಶಕ್ತಿ” ಅಭಿಯಾನ: ನಾಳೆ ರಾಜ್ಯ ಸಮಾರೋಪ ಸಮಾರಂಭ - News Ubaar

ಇತ್ತೀಚಿನ ಸುದ್ದಿ

Subscribe

ಮಂಗಳವಾರ, ಅಕ್ಟೋಬರ್ 30, 2018

“ಜನಾರೋಗ್ಯವೇ ರಾಷ್ಟ್ರ ಶಕ್ತಿ” ಅಭಿಯಾನ: ನಾಳೆ ರಾಜ್ಯ ಸಮಾರೋಪ ಸಮಾರಂಭ

 ಟ್ರೂ ಮೀಡಿಯಾ ನ್ಯೂಸ್ ಅ,30 :
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ರಾಷ್ಟ್ರಾದ್ಯಂತ ಹಮ್ಮಿಕೊಂಡಿರುವ “ಜನಾರೋಗ್ಯವೇ ರಾಷ್ಟ್ರ ಶಕ್ತಿ” ಅಭಿಯಾನದ ಕರ್ನಾಟಕ ರಾಜ್ಯ ಸಮಾರೋಪ ಸಮಾರಂಭವು 31 ಅಕ್ಟೋಬರ್ 2018 ಬುಧವಾರ ದಂದು ಮಂಗಳೂರಿನಲ್ಲಿ ನಡೆಯಲಿದೆ. ಈ ಪ್ರಯುಕ್ತ ಮದ್ಯಾಹ್ನ 3 ಘಂಟೆಗೆ ಸರಿಯಾಗಿ ಜ್ಯೋತಿಯಿಂದ ಪುರಭವನದವರೆಗೆ ಬೃಹತ್ ಮ್ಯಾರಥಾನ್ ಮತ್ತು ಸಂಜೆ 4 ಗಂಟೆಗೆ ಪುರಭವನದಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕರಾಟೆ, ಸ್ಕೇಟಿಂಗ್, ತಾಲೀಮು, ಕುಂಗ್ಫು, ವೈಯ್ಟ್ ಲಿಫ್ಟಿಂಗ್, ಯೋಗ, ತಾಯ್ಕೊಂಡ, ಬೆಂಚ್‍ಪ್ರೆಸ್, ಬಾಡಿ ಷೋ ಮುಂತಾದ ವೈವಿಧ್ಯಮಯ ಆತ್ಮರಕ್ಷಣಾ ಕಲಾ ಪ್ರದರ್ಶನ ನಡೆಯಲಿದೆ. ರಾಷ್ಟ್ರೀಯ, ಮತ್ತು ಅಂತರಾಷ್ಟ್ರೀಯ ಮಟ್ಟದ ಕರಾವಳಿಯ ಯುವ ಪ್ರತಿಭಾವಂತರನ್ನು ಸನ್ಮಾನಿಸಲಾಗುವುದು. ಹಾಗೂ ವೈದ್ಯಾಧಿಕಾರಿಗಳು, ಸಾಮಾಜಿಕ ಹೋರಾಟಗಾರರು, ಚಿಂತಕರು, ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ. ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆಯುವುದರೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸುತ್ತಿದ್ದೇವೆ.

Pages