ಎನ್‌ಐಎ 'ಮೋಸ್ಟ್‌ ವಾಂಟೆಡ್‌' ಪಟ್ಟಿಯಲ್ಲಿ ಪುತ್ತೂರಿನ ಯುವಕ. - News Ubaar

ಇತ್ತೀಚಿನ ಸುದ್ದಿ

Subscribe

ಭಾನುವಾರ, ಅಕ್ಟೋಬರ್ 21, 2018

ಎನ್‌ಐಎ 'ಮೋಸ್ಟ್‌ ವಾಂಟೆಡ್‌' ಪಟ್ಟಿಯಲ್ಲಿ ಪುತ್ತೂರಿನ ಯುವಕ.


ಎನ್‌ಐಎ 'ಮೋಸ್ಟ್‌ ವಾಂಟೆಡ್‌' ಪಟ್ಟಿಯಲ್ಲಿ ಪುತ್ತೂರು ಯುವಕ.

ಟ್ರೂ ಮೀಡಿಯಾ ನ್ಯೂಸ್: ಅ.21,
2007ರ ಅಜ್ಮೀರ್‌ ಸ್ಫೋಟದ ರೂವಾರಿ ರಮೇಶ್‌ ವೆಂಕಟ ರಾವ್‌ ಮಹಾಲ್ಕರ್‌, ಮಾವೋವಾದಿ ನಾಯಕರಾದ ನಂಬಾಲ ಕೇಶವ ರಾವ್‌, ತಿಪ್ಪಿರಿ ತಿರುಪತಿ, ಮುಪ್ಪಾಲ ಲಕ್ಷಣ ರಾವ್‌, ಕಾಶ್ಮೀರಿ ಉಗ್ರ ಗುಲಾಂ ನಬಿ ಖಾನ್‌, ಮಣಿಪುರದ ಯುಎನ್‌ಎಲ್‌ಎಫ್‌ ಸಂಘಟನೆ ನಾಯಕ ಚಬ್ಕುನ್‌ಬಾಮ್‌ ಸೇರಿದಂತೆ ತಲೆಮರೆಸಿಕೊಂಡಿರುವ 'ಮೋಸ್ಟ್‌ ವಾಂಟೆಡ್‌' ಉಗ್ರರು ಹಾಗೂ ನಕ್ಸಲರ ಪಟ್ಟಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಿಡುಗಡೆ ಮಾಡಿದೆ. 

2011ರಲ್ಲಿ ಎನ್‌ಐಎ ಪಾಕಿಸ್ತಾನದಲ್ಲಿ ಅಡಗಿಕೊಂಡಿರುವ 50 'ಮೋಸ್ಟ್‌ ವಾಂಟೆಡ್‌' ವ್ಯಕ್ತಿಗಳ ಪಟ್ಟಿ ಬಿಡುಗಡೆ ಮಾಡಿತ್ತು.


ಪಟ್ಟಿಯಲ್ಲಿ ಕನ್ನಡಿಗ: ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ನೂಜಿಬಾಳ್ತಿಲದ ಜಯಪ್ರಕಾಶ್‌ ಅಲಿಯಾಸ್‌ ಅಣ್ಣಾನ ಹೆಸರು ಎನ್‌ಐಎ ಮೋಸ್ಟ್‌ ವಾಂಟೆಡ್‌ ಪಟ್ಟಿಯಲ್ಲಿದೆ. ಸನಾತನ ಸಂಸ್ಥೆ ಜತೆ ಸಂಬಂಧ ಹೊಂದಿದ್ದ ಈಗ ಅಜ್ಮೀರ್‌ ದರ್ಗಾ ಸ್ಫೋಟ, ಸಂಜೋತಾ ಎಕ್ಸ್‌ಪ್ರೆಸ್‌ ಬಾಂಬ್‌ ಸ್ಫೋಟ, ಗೋವಾ ಮತ್ತು ಹೈದರಾಬಾದ್‌ ಮೆಕ್ಕಾಮಸೀದಿ ಸ್ಫೋಟದಲ್ಲಿ ಭಾಗಿಯಾಗಿದ್ದ ಎಂದು ಆರೋಪಿಸಲಾಗಿತ್ತು .

Pages