ಮಹಿಳೆ ಮುಸ್ಲಿಂ ಎಂಬ ಕಾರಣಕ್ಕೆ ಬಾಡಿಗೆ ಮನೆ ಕೊಡಲು ನಿರಾಕರಿಸಿದ ಮಾಲೀಕರು. - News Ubaar

ಇತ್ತೀಚಿನ ಸುದ್ದಿ

Subscribe

ಭಾನುವಾರ, ಅಕ್ಟೋಬರ್ 21, 2018

ಮಹಿಳೆ ಮುಸ್ಲಿಂ ಎಂಬ ಕಾರಣಕ್ಕೆ ಬಾಡಿಗೆ ಮನೆ ಕೊಡಲು ನಿರಾಕರಿಸಿದ ಮಾಲೀಕರು.


ಟ್ರೂ ಮೀಡಿಯಾ ನ್ಯೂಸ್: ಅ,22
ಮುಸ್ಲಿಂ ಎಂಬ ಕಾರಣಕ್ಕೆ ಮಹಿಳೆಗೆ ಬಾಡಿಗೆಗೆ ಮನೆ ನೀಡಲು ನಿರಾಕರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮುಸ್ಲಿಂ ಮಹಿಳೆಯೊಬ್ಬರು ಈ ಕುರಿತು ಟ್ವೀಟ್ ಮಾಡಿದ್ದು, ಹಲವಾರು ಪ್ರತಿಕ್ರಿಯೆಗಳು ಬಂದಿವೆ. ಎರಡು ಮನೆಯ ಮಾಲೀಕರು ಮುಸ್ಲಿಂ ಕುಟುಂಬ ಎಂಬ ಕಾರಣಕ್ಕೆ ಮನೆ ನೀಡುವುದಕ್ಕೆ ನಿರಾಕರಿಸಿದ್ದಾರೆ. ಮನೆ ಮಹಿಳೆಗೆ ಇಷ್ಟವಾದರೂ ಮಾಲೀಕರು ಅದನ್ನು ಬಾಡಿಗೆಗೆ ಕೊಟ್ಟಿಲ್ಲ.

ಆನ್‌ಲೈನ್ ವೆಬ್‌ಸೈಟ್ ಮೂಲಕ ಮಹಿಳೆ ಮನೆ ನೋಡಿ ಇಷ್ಟಪಟ್ಟಿದ್ದರು. ಮಾಲೀಕರಿಗೆ ಕರೆ ಮಾಡಿದಾಗ ಅವರು ವಿವರಗಳನ್ನು ಕೇಳಿಸಿಕೊಳ್ಳದೇ ನನ್ನ ಹೆಸರು ಕೇಳಿದ ತಕ್ಷಣ ಮುಸ್ಲಿಂಮರಿಗೆ ಮನೆ ನೀಡುವುದಿಲ್ಲ ಎಂದು ಹೇಳಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾಳೆ.

ಆನ್‌ಲೈನ್ ವೆಬ್‌ಸೈಟ್ ವಿರುದ್ಧವೂ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಇಂತಹ ಮನೆಗಳ ಬಗ್ಗೆ ನೀವು ವೆಬ್‌ಸೈಟ್‌ನಲ್ಲಿ ಜಾಹೀರಾತು ನೀಡಿದ್ದೀರಿ ಇದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಲ್ಲವೇ? ಎಂದು ಪ್ರಶ್ನಿಸಿದ್ದಾಳೆ.

'ನನ್ನ ದೇಶದಲ್ಲಿಯೇ ನನಗೆ ಬಾಡಿಗೆಗೆ ಮನೆ ಸಿಗುತ್ತಿಲ್ಲ. ನನ್ನ ಹಿಂದೂ ಸ್ನೇಹಿತರು ಇದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕು' ಎಂದು ಹೇಳಿಕೊಳ್ಳುತ್ತೇನೆ ಎಂದು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಾಕಿದ್ದಾರೆ.

ಆನ್‌ಲೈನ್ ವೆಬ್‌ಸೈಟ್ ಸಹ ಮಹಿಳೆಯ ಟ್ವಿಟ್‌ಗೆ ಪ್ರತಿಕ್ರಿಯೆ ನೀಡಿದೆ. ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ವೆಬ್‌ಸೈಟ್ ನಾವು ನಿಮ್ಮ ಪರವಾಗಿದ್ದೇವೆ. ಈ ಎರಡು ಮನೆಯ ಜಾಹೀರಾತನ್ನು ವೆಬ್‌ಸೈಟ್‌ನಿಂದ ತೆಗೆಯುತ್ತೇವೆ. ನಾವು ಸಾಮಾಜಿಕ ನ್ಯಾಯದ ಪರವಾಗಿದ್ದೇವೆ ಎಂದು ವೆಬ್‌ಸೈಟ್ ಹೇಳಿದೆ.
-----------------------------------------------------------------------------

Pages