ಟ್ರೂ ಮೀಡಿಯಾ ನ್ಯೂಸ್ : ಅ 21,
ಭಾರತೀಯ ಸೈನಿಕರಿಗಾಗಿ “ಮದರಸ ನದ್ವತ್ ಉಲ್ ಉಲೂಮ್” ಮದರಸದ 200 ವಿದ್ಯಾರ್ಥಿಗಳು ಲಖ್ನೌ ಬಲರಾಂಪುರ ಆಸ್ಪತ್ರೆಯಲ್ಲಿ ಮಾಡಿದರು.
ಮದರಸ ನದ್ವತ್ ಉಲ್ ಉಲೂಮ್ ವಿದ್ಯಾರ್ಥಿಗಳು ಈ ಮೊದಲು ಕೂಡ ಮಾನವೀಯತೆಯ ನೆಲೆಯಲ್ಲಿ ಸಾರ್ವಜನಿಕವಾಗಿ ಹಲವು ರಕ್ತದಾನ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಆದರೆ ಈ ಬಾರಿ ದೇಶ ರಕ್ಷಣೆಗೆ ಕಟಿಬದ್ದರಾಗಿ ನಿಂತಿರುವ ಭಾರತೀಯ ಸೈನಿಕರಿಗಾಗಿ ರಕ್ತದಾನ ಮಾಡಿದ್ದಾರೆ.
ದೇಶದ ಗಡಿಯಲ್ಲಿರುವ ನಮ್ಮ ಸೈನಿಕರಿಗೆ ಯಾವುದೇ ಸಮಯದಲ್ಲಿ, ಯಾವುದೇ ವಿಷಯದಲ್ಲಿ ಅಗತ್ಯ ಬಿದ್ದರೆ, ತ್ಯಾಗ ಮಾಡಲು ನಾವು ಸಿದ್ಧರಿದ್ದೇವೆ. ನಮ್ಮ ಪೂರ್ವಜರು ಇಂಡಿಯಾ ದೇಶವನ್ನು ಸ್ವತಂತ್ರಗೊಳಿಸಲು ತಮ್ಮ ಸರ್ವಸ್ವವನ್ನೂ ಧಾರೆ ಎರೆದು ಹುತಾತ್ಮರಾಗಿದ್ದಾರೆ. ಅಂತಹಾ ಮಹಾನ್ ವ್ಯಕ್ತಿಗಳ ಪೀಳಿಗೆಯಾದ ನಮ್ಮಲ್ಲೂ ಕುಡಾ ಅದೇ ರಕ್ತ ಹರಿಯುತ್ತಿದೆ ಎಂದು ವಿದ್ಯಾರ್ಥಿಗಳು ಹೇಳಿದರು.
