ಮೀಟೂ: ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ವಿರುದ್ಧ ಲೈಂಗಿಕ ಕಿರುಕುಳ ಆರೋಪ, - News Ubaar

ಇತ್ತೀಚಿನ ಸುದ್ದಿ

Subscribe

ಶುಕ್ರವಾರ, ಅಕ್ಟೋಬರ್ 19, 2018

ಮೀಟೂ: ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ವಿರುದ್ಧ ಲೈಂಗಿಕ ಕಿರುಕುಳ ಆರೋಪ,



ಟ್ರೂ ಮೀಡಿಯ ನ್ಯೂಸ್ : ಅ19,
ಮುಚ್ಚಿಹೋಗಿದ್ದ ಹಲವಾರು ಲೈಂಗಿಕ ಕಿರುಕುಳ ಪ್ರಕರಣಗಳು ಮೀಟೂ ಅಭಿಯಾನದ ಮೂಲಕ ಹೊರ ಬರುತ್ತಿದೆ. ಈಗಾಗಲೇ ಹಲವಾರು ಖ್ಯಾತನಾಮರ ವಿರುದ್ಧ ಈ ಆರೋಪಗಳು ಕೇಳಿಬಂದಿದೆ. ಇದರಿಂದಾಗಿ ಕೇಂದ್ರ ಸಚಿವ ಎಂ.ಜೆ ಅಕ್ಬರ್ ಕೂಡಾ ರಾಜೀನಾಮೆ ನೀಡಿದ್ದಾರೆ. ಇದೀಗ ಮೀಟೂ ಅಭಿಯಾನದ ಮೂಲಕ ಬಾಗಲಕೋಟೆ ಮೂಲದ ಮಾಧುರಿ ಮುಧೋಳ್ ಎಂಬವರು ಆರೋಪ ಮಾಡಿದ್ದು, ಫೇಸ್ಬುಕ್ ಖಾತೆಯಲ್ಲಿ ಈ ಕುರಿತು ಉಲ್ಲೇಖಿಸಿದ್ದಾರೆ. ಸದ್ಯ ಪೋಸ್ಟ್ ಅನ್ನು ಡಿಲೀಟ್ ಮಾಡಲಾಗಿದೆ.

ಮಾಧುರಿ ಮುಧೋಳ್ ಕರ್ನಾಟಕ ರಾಜ್ಯ ಬಿಜೆಪಿಯ ಮಹಿಳಾ ಮೋರ್ಚಾದ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಲೈಂಗಿಕ ದೌರ್ಜನ್ಯ ನೀಡಿದ್ದಾರೆ. ಅವರು ಪದೇ ಪದೇ ನನಗೆ ಕಾಲ್ ಮಾಡಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಮತ್ತೋರ್ವ ಬಿಜೆಪಿ ನಾಯಕ ಶಿವಾನಂದ ನಾಯಕ್ ಮೇಲೂ ಆರೋಪವನ್ನು ಮಾಡಿದ್ದಾರೆ. ಸದಾನಂದ ಗೌಡ ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಸದ್ಯ ಈ ಪೋಸ್ಟ್ ಅನ್ನು ಮಾಧುರಿ ಡಿಲೀಟ್ ಮಾಡಿದ್ದಾರೆ.

https://m.facebook.com/madhuri.mudhol/posts/10156597353710479

Pages