ಟ್ರೂ ಮೀಡಿಯಾ ನ್ಯೂಸ್: ಅ 20,
ಶನಿವಾರ ಬೆಳಗ್ಗಿನ ಜಾವ ನಿಧನರಾದ ಮಂಜೇಶ್ವರ ದ ಜಪಪ್ರಿಯ ಶಾಸಕ ಪಿ.ಬಿ ಅಬ್ದುಲ್ ರಝಾಕ್ ರ ಅಂತಿಮ ದರ್ಶನಕ್ಕೆ ಜನ ಪ್ರವಾಹವೇ ಹರಿದು ಬರುತ್ತಿದೆ. ರದ್ದುಚ್ಚರ ನಿಧನ ಇಡೀ ಜಿಲ್ಲೆಯನ್ನೇ ಶೋಕ ಸಾಗರದಲ್ಲಿ ಮುಳುಗಿಸಿದ್ದು ಜಿಲ್ಲೆಯ ವಿವಿಧೆಡೆಗಳಿಂದ ನಾಯಮ್ಮಾರ್ ಮೂಲೆಯ ಅವರ ನಿವಾಸಕ್ಕೆ ಜನ ಸಾಗರವೇ ಹರಿದು ಬರುತ್ತಿದೆ.
![]() |
| ಜಾಹೀರಾತು |
ಜ್ವರ ಬಾಧಿತರಾದ ರದ್ದುಚ್ಚ 3 ದಿವಸಗಳ ಹಿಂದೆ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಇವರು ಶನಿವಾರ ಮುಂಜಾನೆ ನಿಧನರಾಗಿದ್ದಾರೆ.
ಸಂಜೆ ವೇಳೆಗೆ ಇಲ್ಲಿನ ಆಲಂಪಾಡಿ ಜುಮಾ ಮಸೀದಿ ಖಬರ್ ಸ್ಥಾನದಲ್ಲಿ ಮ್ರತದೇಹದ ದಫನ ಕಾರ್ಯ ನಡೆಯಲಿದೆ. ರದ್ದುಚ್ಚ ಎಂದೇ ಕರೆಯಲ್ಪಡುತ್ತಿದ್ದ ಇವರು ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಶಾಸಕರ ನಿಧನದ ಹಿನ್ನಲೆಯಲ್ಲಿ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿದೆ.


