ಉಪ್ಪಿನಂಗಡಿಯಲ್ಲಿ ಭಾರೀ ಟ್ರಾಫಿಕ್ ಜಾಮ್: ಮುಕ್ಕಾಲು ಘಂಟೆ ತಗುಲಿದ ಒಂದೇ ಕಿಮೀ, ಪ್ರಯಾಣಿಕರು ಪರದಾಟ! - News Ubaar

ಇತ್ತೀಚಿನ ಸುದ್ದಿ

Subscribe

ಗುರುವಾರ, ಮೇ 1, 2025

ಉಪ್ಪಿನಂಗಡಿಯಲ್ಲಿ ಭಾರೀ ಟ್ರಾಫಿಕ್ ಜಾಮ್: ಮುಕ್ಕಾಲು ಘಂಟೆ ತಗುಲಿದ ಒಂದೇ ಕಿಮೀ, ಪ್ರಯಾಣಿಕರು ಪರದಾಟ!

ಉಪ್ಪಿನಂಗಡಿ : ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಮೀ ಗಟ್ಟಲೆ ಟ್ರಾಫಿಕ್ ಜಾಮ್  ನಡೆದು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.


ಹಲವು ಕಾರ್ಯಕ್ರಮಗಳಿರುವುದರಿಂದ ಪುತ್ತೂರಿನಿಂದ ಉಪ್ಪಿನಂಗಡಿ ಪ್ರವೇಶಿಸುವ ರಸ್ತೆ ಮತ್ತು ಉಪ್ಪಿನಂಗಡಿ ಬಸ್ ನಿಲ್ದಾಣ ಟರ್ನ್ ನಲ್ಲಿ ಭಾರಿ ಟ್ರಾಫಿಕ್ ಜಾಮ್ ನಡೆದಿದೆ. ಕಡಬ ಕ್ರಾಸ್ ಸಮೀಪದಿಂದ ವಾಹನಗಳ ಸಾಲುಗಟ್ಟಿ ನಿಂತಿವೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯೂ ನಡೆಯುತ್ತಿರುವುದರಿಂದ ಟ್ರಾಫಿಕ್ ಜಾಮ್ ಜಾಸ್ತಿಯಾಗಿದೆ.


ಬೆಳಿಗ್ಗೆ 11 ಗಂಟೆಯಿಂದಲೇ ಭಾರಿ ಟ್ರಾಫಿಕ್ ಜಾಮ್ ನಡೆಯುತ್ತಿದೆ. ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಲು ಬಂದ ಪುತ್ತೂರು ಟ್ರಾಫಿಕ್ ಠಾಣಾ ಪೊಲೀಸರು ನೆಕ್ಕಿಲಾಡಿ MRPL ಪೆಟ್ರೋಲ್ ಪಂಪ್ ನಲ್ಲಿಂದ ನಡೆದುಕೊಂಡೆ ಹೋಗಬೇಕಾಯಿತು.


ಉಪ್ಪಿನಂಗಡಿ ಬಸ್ ನಿಲ್ದಾಣದಿಂದ ನೆಕ್ಕಿಲಾಡಿ ಟರ್ನ್ ಗೆ ಬರಲು 45 ನಿಮಿಷ ಸಮಯ ತಗುಲುವಷ್ಟು ಟ್ರಾಫಿಕ್ ಜಾಮ್ ಆಗಿದೆ. ಉಪ್ಪಿನಂಗಡಿ ಮತ್ತು ಪುತ್ತೂರು ಪೊಲೀಸರು ಸುಡುಬಿಸಿಲಿನಲ್ಲಿ ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಲು ಪರದಾಡುತ್ತಿದ್ದಾರೆ.

Pages