ವಿಶೇಷ ವರದಿ | ನ್ಯೂಸ್ ಉಬಾರ್ ಡೆಸ್ಕ್ |
ಇತ್ತೀಚೆಗಿನ ದಿನಗಳಲ್ಲಿ ಗರ್ಭಧಾರಣಾ ಸಂದರ್ಭದಲ್ಲಿ ನಾನಾ ಸ್ಕ್ರೀನಿಂಗ್ ಟೆಸ್ಟ್‌ಗಳನ್ನು ಮಾಡಿಸುವ ಪೋಷಕರ ಸಂಖ್ಯೆ ಹೆಚ್ಚುತ್ತಿದೆ. ವಿಶೇಷವಾಗಿ ಡಬಲ್ ಮಾರ್ಕರ್, ಟ್ರಿಪಲ್ ಮಾರ್ಕರ್, NIPT ಟೆಸ್ಟ್‌ಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಆದರೆ ಈ ಟೆಸ್ಟ್‌ಗಳ ನಿಖರತೆ ಹಾಗೂ ಲ್ಯಾಬ್ ವರದಿಗಳ ಆಧಾರದ ಬಗ್ಗೆ ಜನರಲ್ಲೊಂದು ಗಂಭೀರ ಶಂಕೆ ಮೂಡುತ್ತಿದೆ.
ದಕ್ಷಿಣ ಕನ್ನಡದ ಕೆಲವು ಪೋಷಕರ ಅನುಭವಗಳು ಈ ಬಗ್ಗೆ ಬೆಳಕು ಚೆಲ್ಲುತ್ತಿವೆ.
ಉದಾಹರಣೆ 1: ವರದಿ Very Low Risk, ಆದರೆ ಮಗು ಡೌನ್ ಸಿಂಡ್ರೋಮ್
ಒಬ್ಬಾಕೆ ಮಹಿಳೆಗೆ NT ಸ್ಕ್ಯಾನ್ ನಲ್ಲಿ ಯಾವುದೇ ಅಸಾಮಾನ್ಯತೆ ಕಂಡುಬಂದಿರಲಿಲ್ಲ. ವೈದ್ಯರು ಹೆಚ್ಚಿನ ಪರೀಕ್ಷೆಗಾಗಿ ಒತ್ತಾಯಿಸದಿದ್ದರೂ, ಆತ್ಮೀಯ ನಿರ್ಧಾರದಿಂದ ಡಬಲ್ ಮಾರ್ಕರ್ ಟೆಸ್ಟ್ ಮಾಡಿಸಿದಾಗ “Very Low Risk” ವರದಿ ಲಭ್ಯವಾಯಿತು. ಆದರೆ ಹೆರಿಗೆ ಬಳಿಕ ಮಗುವಿಗೆ ಡೌನ್ ಸಿಂಡ್ರೋಮ್ ಇರುವುದು ದೃಢವಾಯಿತು. ಇದು ವರದಿಗಳ ನಿಖರತೆಯ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ ಸ್ಥಿತಿಯನ್ನು ತಂದಿದೆ.
ಉದಾಹರಣೆ 2: ವರದಿ High Risk, ಆದರೆ NIPT ನಾರ್ಮಲ್
ಇನ್ನೊಬ್ಬ ಮಹಿಳೆಗೆ NT ಸ್ಕ್ಯಾನ್ ಅಬ್ನಾರ್ಮಲ್ ಬಂದ ನಂತರ, ವೈದ್ಯರು ಟ್ರಿಪಲ್ ಮಾರ್ಕರ್ ಟೆಸ್ಟ್‌ನ್ನು ಶಿಫಾರಸು ಮಾಡಿದರು. ಲ್ಯಾಬ್ ವರದಿಯಲ್ಲಿ “High Risk” ಎಂದು ತೋರಿತಾದರೂ fetus specialist ಮಗುವು ನಾರ್ಮಲ್ ಆಗಿರಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ನಂತರ ಮಾಡಿದ NIPT ಟೆಸ್ಟ್ ವರದಿಯಲ್ಲಿ ಯಾವುದೇ ಸಮಸ್ಯೆ ಪತ್ತೆಯಾಗಲಿಲ್ಲ — ಅದು ಸಂಪೂರ್ಣ ನಾರ್ಮಲ್ ಆಗಿತ್ತು.
ಈ ಘಟನೆಗಳು ಒಂದು ಗಂಭೀರ ಸಂಶಯಕ್ಕೆ ದಾರಿ ಮಾಡಿಕೊಡುತ್ತವೆ:
ಡಬಲ್ ಮಾರ್ಕರ್ ಮತ್ತು ಟ್ರಿಪಲ್ ಮಾರ್ಕರ್ ಲ್ಯಾಬ್‌ಗಳು reports ತಯಾರಿಸುವಾಗ ಕೇವಲ NT ಸ್ಕ್ಯಾನ್ ವಿವರಗಳು ಮತ್ತು ತಾಯಿಯ ವಯಸ್ಸಿನ ಆಧಾರದಲ್ಲಿ computerized risk calculation ಮಾಡುತ್ತಿರುವರೆ?
ಹೀಗೆ ಅಂದಾಜುಮಾಡಿ ವರದಿ ಕೊಡುತ್ತಿದ್ರೆ, ನಾವು ಯಾಕೆ ಅಂತಹ ದುಬಾರಿ ಟೆಸ್ಟ್‌ಗಳನ್ನು ಮಾಡಿಸಬೇಕು?
ಇದು ಕೇವಲ ಟೀಕೆ ಅಲ್ಲ — ಜನರ ಮನಸ್ಸಲ್ಲಿ ಮೂಡುವ ಸತ್ಯವಾದ ಪ್ರಶ್ನೆ. ಪ್ರತಿ ವರದಿಗೂ ವೈಜ್ಞಾನಿಕ ಆಧಾರ, ಮತ್ತು ಲ್ಯಾಬ್‌ಗಳೇನಾದರೂ ತಪ್ಪು ವರದಿ ನೀಡಿದರೆ, ಅದರ ಹೊಣೆಗಾರಿಕೆ ಯಾರು?
ಹೀಗೆ ಅಂದಾಜಿನ ಆಧಾರದಲ್ಲಿ ಲಭ್ಯವಾಗುವ ವರದಿಗಳ ಮೇಲೆ ಶತಪ್ರತಿಶತ ವಿಶ್ವಾಸವಿಟ್ಟು ನಿರ್ಧಾರ ತೆಗೆದುಕೊಳ್ಳುವುದು ಅಪಾಯಕಾರಿಯಾಗಿದೆ. ವೈದ್ಯರ ಮಾರ್ಗದರ್ಶನದಲ್ಲಿ, ಅನುಮಾನವಿದ್ದರೆ NIPT ಅಥವಾ genetic counseling ಪಡೆಯುವುದು ಉತ್ತಮ.
ಇಲ್ಲದೆ, ಈ ಟೆಸ್ಟ್‌ಗಳ reports ಕುರಿತಾದ ಲ್ಯಾಬ್‌ಗಳ ಕಾರ್ಯವಿಧಾನಗಳು ಹೆಚ್ಚು ಪಾರದರ್ಶಕವಾಗಬೇಕಾದ ಅಗತ್ಯ ಇದೆ. ಇದರಿಂದ ತಾಯಿ-ತಂದೆಗಳು ಹೆಚ್ಚು ಅರಿವು ಹೊಂದಿ, ಸುರಕ್ಷಿತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
