ಬೆಳ್ತಂಗಡಿ ಗುರುದೇವ ಸಹಕಾರಿ ಸಂಘದ ಅಧ್ಯಕ್ಷ ಎನ್. ಪದ್ಮನಾಭ ಮಾಣಿಂಜ ನಿಧನ - News Ubaar

ಇತ್ತೀಚಿನ ಸುದ್ದಿ

Subscribe

ಬುಧವಾರ, ಮಾರ್ಚ್ 5, 2025

ಬೆಳ್ತಂಗಡಿ ಗುರುದೇವ ಸಹಕಾರಿ ಸಂಘದ ಅಧ್ಯಕ್ಷ ಎನ್. ಪದ್ಮನಾಭ ಮಾಣಿಂಜ ನಿಧನ

 

ಬೆಳ್ತಂಗಡಿ : ಕುಕ್ಕಿನಡ್ಡ ಕುಟುಂಬದ ಹಿರಿಯ ತಲೆ, ನಿವೃತ್ತ ಡಿಎಫ್‌ಓ, ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎನ್. ಪದ್ಮನಾಭ ಮಾಣಿಂಜ (87) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಾರ್ಚ್ 6ರಂದು ಬೆಳಿಗ್ಗೆ ನಿಧನರಾದರು.

ಮಾಜಿ ಶಾಸಕ ಕೆ. ವಸಂತ ಬಂಗೇರರೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಅವರು, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾಗಿ ಸಂಘದ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಿದ್ದರು. ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಪ್ರಗತಿಯ ಹಿಂದೆ ಪದ್ಮನಾಭ ಮಾಣಿಂಜ ಅವರ ದೂರದೃಷ್ಟಿ ಚಿಂತನೆ ಮಹತ್ತರವಾದುದು.


ಉಜಿರೆ ರಬ್ಬರ್ ಸೊಸೈಟಿಯ ಉಪಾಧ್ಯಕ್ಷ ಹಾಗೂ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಸರಳ, ನೇರ, ನಿಷ್ಠುರವಾದ ವ್ಯಕ್ತಿತ್ವವನ್ನು ಹೊಂದಿದ್ದ ಅವರು ಪತ್ನಿ ಇಂದಿರಾ, ಪುತ್ರರಾದ ಸೂರಜ್, ಸುಧೀರ್, ಸುಜಿತ್, ಸೊಸೆಯಂದಿರಾದ ಸ್ನೇಹ, ಟೀನಾ, ದಿವ್ಯ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.


ಪದ್ಮನಾಭ ಮಾಣಿಂಜ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಮಧ್ಯಾಹ್ನ 12 ಗಂಟೆಯ ತನಕ ಬಲ್ಮಠದ 'ಇಂದುಪದ್ಮ' ನಿವಾಸದಲ್ಲಿ ನಡೆಯಲಿದ್ದು, ನಂತರ ಪುಂಜಾಲಕಟ್ಟೆ ಮಾಣಿಂಜದ ಸ್ವಗೃಹದಲ್ಲಿ ಸಂಜೆ 4 ಗಂಟೆಯ ತನಕ ಅಂತಿಮ ದರ್ಶನ ನಡೆದು, ಅಂತಿಮ ವಿಧಿವಿಧಾನಗಳು ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.



Pages