ತಾಯ್ನಾಡಿಗೆ ಮರಳುವ ಸಂತೋಷದಲ್ಲಿದ್ದ ಮಂಗಳೂರು ಮೂಲದ ಯುವಕ ಜಿದ್ದಾ ವಿಮಾನ ನಿಲ್ದಾಣದಲ್ಲಿ ಹೃದಯಾಘಾತದದಿಂದ ಮೃತ್ಯು . - News Ubaar

ಇತ್ತೀಚಿನ ಸುದ್ದಿ

Subscribe

ಗುರುವಾರ, ಫೆಬ್ರವರಿ 13, 2025

ತಾಯ್ನಾಡಿಗೆ ಮರಳುವ ಸಂತೋಷದಲ್ಲಿದ್ದ ಮಂಗಳೂರು ಮೂಲದ ಯುವಕ ಜಿದ್ದಾ ವಿಮಾನ ನಿಲ್ದಾಣದಲ್ಲಿ ಹೃದಯಾಘಾತದದಿಂದ ಮೃತ್ಯು .

 


ಜಿದ್ದಾ: ಗುರವಾರ ರಾತ್ರಿ ಜಿದ್ದಾದಿಂದ ಮಂಗಳೂರಿಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸಬೇಕಿದ್ದ ಬೆಳ್ತಂಗಡಿಯ ಹಿದಾಯತ್ ಜಿದ್ದಾ ವಿಮಾನ ನಿಲ್ದಾಣದಲ್ಲಿಯೇ ಹೃದಯಾಘಾತದಿಂದ ಮೃತಪಟ್ಟ ಘಟನೆ ವರದಿಯಾಗಿದೆ.


ಫೆಬ್ರವರಿ 14ರಂದು ರಾತ್ರಿ 8:10ರ ಏರ್ ಇಂಡಿಯಾ ವಿಮಾನದಲ್ಲಿ ಮಂಗಳೂರಿಗೆ ಪ್ರಯಾಣಿಸಬೇಕಿದ್ದ ಹಿದಾಯತ್ ಗೆ, ಜಿದ್ದಾ ಏರ್ ಪೋರ್ಟ್ ತಲುಪುತ್ತಿದ್ದಂತೆ ಎದೆ ನೋವು ಕಾಣಿಸಿಕೊಂಡಿತು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.


ಮೃತರು ತಂದೆ ತಾಯಿ ಪತ್ನಿ ಹಾಗೂ ಒಂದು ಗಂಡು,ಮೂರು ಹೆಣ್ಣು ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Pages