ದಕ್ಷಿಣ ಕನ್ನಡ: ಅಡಿಕೆ ವ್ಯಾಪಾರ ಮತ್ತು ಸುಪಾರಿ ವ್ಯಾಪಾರಗಳಲ್ಲಿ ತೊಡಗಿರುವ ಕೆಲವು ಕಂಪೆನಿಗಳ ಮೇಲೆ ಐಟಿ ದಾಳಿ - News Ubaar

ಇತ್ತೀಚಿನ ಸುದ್ದಿ

Subscribe

ಶುಕ್ರವಾರ, ಫೆಬ್ರವರಿ 14, 2025

ದಕ್ಷಿಣ ಕನ್ನಡ: ಅಡಿಕೆ ವ್ಯಾಪಾರ ಮತ್ತು ಸುಪಾರಿ ವ್ಯಾಪಾರಗಳಲ್ಲಿ ತೊಡಗಿರುವ ಕೆಲವು ಕಂಪೆನಿಗಳ ಮೇಲೆ ಐಟಿ ದಾಳಿ

 

ಮಂಗಳೂರು; ಅಡಿಕೆ ವ್ಯಾಪಾರ ಮತ್ತು ಸುಪಾರಿ ವ್ಯಾಪಾರಗಳಲ್ಲಿ ತೊಡಗಿರುವ ಕೆಲವು ಕಂಪೆನಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿರುವ ಘಟನೆ ನಡೆದಿದೆ.

ಅಡಿಕೆ ವ್ಯಾಪಾರ ಮತ್ತು ವ್ಯವಹಾರದಲ್ಲಿ ತೊಡಗಿಸಿ ಕೊಂಡಿರುವ ಸ್ವಸ್ತಿಕ್ ಟ್ರೇಡಿಂಗ್ ಮತ್ತು ಇತರ ಸಂಸ್ಥೆಗಳುಉತ್ತರ ಪ್ರದೇಶ, ಬಿಹಾರ, ದೆಹಲಿ ಮತ್ತು ಇತರ ಉತ್ತರ ಭಾರತದ ರಾಜ್ಯಗಳಲ್ಲಿ ವ್ಯಾಪಾರ ವ್ಯವಹಾರ ನಡೆಸುತ್ತಿರುವ ಸಂಸ್ಥೆಯಾಗಿದ್ದು,ಸಾವಿರಾರು ಕೋಟಿ‌ ರೂಪಾಯಿ ವ್ಯವಹಾರ ನಡೆಸಿ ಆದಾಯ ತೆರಿಗೆ ವಂಚನೆ ಮಾಡಿರುವುದು ಗೊತ್ತಾಗಿರುವ ಹಿನ್ನೆಲೆ ದಾಳಿ‌ ನಡೆಸಿದ್ದಾರೆ.


ದಾಳಿ ಸಂದರ್ಭ‌ ಅಕ್ರಮ ವ್ಯವಹಾರವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಸಂಸ್ಥೆ ಪಾನ್ ಮಸಾಲಾ, ಸುಪಾರಿ ಮತ್ತು ಇತರ ಗುಟ್ಕಾ ಉತ್ಪನ್ನಗಳ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಅಧಿಕಾರಿಗಳು ಕೋಟ್ಯಂತರ ರೂಪಾಯಿ ನಗದು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಐಟಿ ಮನೆಯಲ್ಲಿ ಕೋಟ್ಯಾಂತರ ರೂಪಾಯಿ‌ ಮೌಲ್ಯದ ದಾಖಲೆ ಇಲ್ಲದ ಆಭರಣ ವಶಕ್ಕೆ ಪಡೆದು ,ಸತ್ಯೇಂದ್ರ ಶರ್ಮಾ ಮತ್ತು ಶಿವಕುಮಾರ್ ಶರ್ಮಾ ಎಂಬವರ ಕಂಪನಿಗೆ ಸಂಬಂಧಪಟ್ಟಂತೆ ಐ ಟಿ ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ.

Pages