ಉಳ್ಳಾಲ: ಸಮಾಜ ಸೇವಕರಾದ ಕಣಚೂರು ಮೋನು ಅವರ ಜೀವನ ವೃತ್ತಾಂತವನ್ನು ಬಿಂಬಿಸುವ ಪುಸ್ತಕ ಹಾಗೂ ಸಾಕ್ಷ್ಯಚಿತ್ರ ವನ್ನು ಫೆ.25 ರಂದು ಕಣಚೂರು ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಕಣಚೂರು ಅಭಿಮಾನಿಗಳ ಬಳಗ ದ ಆಶ್ರಯದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಕಣಚೂರು ಅಭಿಮಾನ ಬಳಗದ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಹೇಳಿದರು.
ಅವರು ತೊಕ್ಕೊಟ್ಡು ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಅದೇ ದಿನದಂದು ಕಣಚೂರು ಆಯುರ್ವೇದಿಕ್ ಕಾಲೇಜು, ಕಾಲೇಜ್ ಆಫ್ ಫಾರ್ಮಸಿ, ಕಣಚೂರು ಕಾನ್ಸರೆನ್ಸ್ ಡೋಮ್, ಇಂಟರ್ ನ್ಯಾಶನಲ್ ಕ್ಯಾಥರೈಝೇಶನ್ ಲ್ಯಾಬ್ ಮುಂತಾದ ಹಲವು ಘಟಕಗಳು ಉದ್ಘಾಟನೆಗೊಳ್ಳಲಿದೆ ಎಂದರು.
ಕಣಚೂರು ಅಭಿಮಾನಿಗಳ ಬಳಗದ ಉಪಾಧ್ಯಕ್ಷ ಹೈದರ್ ಪರ್ತಿಪಾಡಿ ಮಾತನಾಡಿ, ಕಣಚೂರು ಮೋನು ಅವರ ಜೀವನ ಸಾಧನೆಯನ್ನು ತಿಳಿಸಲು ಇಂತಹ ಪುಸ್ತಕಗಳು ಉಪಯುಕ್ತಕಾರಿಯಾಗಿದ್ದು, ಕೇವಲ ಒಂದೇ ಕ್ಷೇತ್ರದಲ್ಲಿ ಮಾತ್ರವಲ್ಲದೇ ಎಲ್ಲ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಸಾಧನೆಯ ಶಿಖರವನ್ನು ಏರಿದ ಕಣಚೂರು ಮೋನು ಅವರ ಯಶೋಗಾಥೆಯನ್ನು ತಿಳಿಸಲು ಕಳೆದ ಎಂಟು ವರ್ಷಗಳ ಹಿಂದೆ ರೂಪುಗೊಂಡ ಈ ಪುಸ್ತಕ, ಕಣಚೂರು ಅಭಿಮಾನಿಗಳ ಬಳಗದ ಆಶ್ರಯದಲ್ಲಿ ಬಿಡುಗಡೆಗೊಳ್ಳಲಿದೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಭಾಪತಿ ಯು.ಟಿ. ಖಾದರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವೈದ್ಯಕೀಯ ಸಚಿವ ಡಾಕ್ಟರ್ ಶರಣ್ ಪ್ರಕಾಶ್ ಪಟೇಲ್, ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ, ಮಾಜಿ ಸಚಿವೆ ಮೋಟಮ್ಮ ಶಾಸಕರುಗಳಾದ ಅಶೋಕ್ ಕುಮಾರ್ ರೈ, ಡಾಕ್ಟರ್ ವೈ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಡಿ.ಟಿ. ರಾಜೇಗೌಡ, ಐವನ್ ಡಿ. ಸೋಜಾ. ಮಂಜುನಾಥ ಭಂಡಾರಿ, ಮಾಜಿ ಸಚಿವ ರಮಾನಾಥ್ ರೈ ಮತ್ತಿತರರು ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಕಣಚೂರು ಅಭಿಮಾನಿ ಬಳಗದ ಉಪಾಧ್ಯಕ್ಷರಾದ ಟಿ.ಎಸ್. ಅಬ್ದುಲ್ಲ ಸಾಮಣಿಗೆ, ಮಾಧವ ಬಗಂಬಿಲ, ಸಂಚಾಲಕ ಡಿ. ಐ. ಅಬೂಬಕರ್ ಕೈರಂಗಳ ಮುಂತಾದವರು ಉಪಸ್ಥಿತರಿದ್ದರು
