ಕೊಡಗು: ಫೆ.21 ರಿಂದ ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್. - News Ubaar

ಇತ್ತೀಚಿನ ಸುದ್ದಿ

Subscribe

ಶುಕ್ರವಾರ, ಫೆಬ್ರವರಿ 14, 2025

ಕೊಡಗು: ಫೆ.21 ರಿಂದ ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್.

ಕೊಡಗು : ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಸಮಾರಂಭವು ಫೆ.21 ರಿಂದ 28 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಎಮ್ಮೆಮಾಡು ಎಮ್ಮೆಮಾಡು ಜಮಾಯತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ ತಿಳಿಸಿದ್ದಾರೆ.

ದಕ್ಷಿಣ ಕರ್ನಾಟಕದ ಮುಸ್ಲಿಂ ಪುಣ್ಯ ಕ್ಷೇತ್ರಗಳ ಪೈಕಿ ಎಮ್ಮೆಮಾಡು ಗ್ರಾಮಕ್ಕೆ ಅಗ್ರಸ್ಥಾನ. ಏಕೆಂದರೆ ಇದು ಸೂಫಿ ಸಂತ ಸಯ್ಯದ್‌ ವಲಿಯುಲ್ಲಾ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಸ್ಥಳ.

ಜಿಲ್ಲಾ ಕೇಂದ್ರ ಮಡಿಕೇರಿಯಿಂದ ನಾಪೋಕ್ಲು ಮೂಲಕ ಸುಮಾರು 28 ಕಿ.ಮೀ. ಕ್ರಮಿಸಿದರೆ ಗ್ರಾಮಕ್ಕೆ ತಲುಪಬಹುದು. ಈ ಬಾರಿ ಫೆಬ್ರವರಿ ತಿಂಗಳ 21ರಂದು ಧ್ವಜಾರೋಹಣದೊಂದಿಗೆ ಊರೂಸ್‌ಗೆ ಚಾಲನೆ ನೀಡಲಾಗುವುದು. ಫೆ. 24ರಂದು ಸರ್ವಧರ್ಮ ಸಮ್ಮೇಳನ ಮತ್ತು ಅನ್ನದಾನ ಕಾರ್ಯಕ್ರಮ ನಡೆಯಲಿದೆ. ಫೆ . 28ರಂದು ಊರೂಸ್  ಸಂಪನ್ನಗೊಳ್ಳಲಿದೆ.

Pages