ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸುವ ಮೂಲಕ ವಿದ್ಯಾರ್ಥಿ ಹೋರಾಟವನ್ನು ಹತ್ತಿಕ್ಕಲಾಗದು : ಅಥಾವುಲ್ಲಾ ಪುಂಜಾಲಕಟ್ಟೆ. - News Ubaar

ಇತ್ತೀಚಿನ ಸುದ್ದಿ

Subscribe

ಬುಧವಾರ, ಸೆಪ್ಟೆಂಬರ್ 15, 2021

ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸುವ ಮೂಲಕ ವಿದ್ಯಾರ್ಥಿ ಹೋರಾಟವನ್ನು ಹತ್ತಿಕ್ಕಲಾಗದು : ಅಥಾವುಲ್ಲಾ ಪುಂಜಾಲಕಟ್ಟೆ.

ನ್ಯೂಸ್ ಉಬಾರ್:
ಅಸಂವಿಧಾನಿಕವಾದ ಒಕ್ಕೂಟ ವ್ಯವಸ್ಥೆಗೆ ಮಾರಕವಾದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ವಿರುಧ್ದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನಡೆಸಿದ ವಿಧಾನಸಭಾ ಮುತ್ತಿಗೆಯ ನಡುವೆ ಶಾಂತಿಯುತವಾಗಿದ್ದ ವಿದ್ಯಾರ್ಥಿಗಳ ಮೇಲೆ ಪೋಲಿಸರು ನಡೆಸಿದ ಮಾರಣಾಂತಿಕ ಹಲ್ಲೆಯ ಕುರಿತು ಸೂಕ್ತ ತನಿಖೆಯಾಗಬೇಕು ಹಾಗೂ ತಪ್ಪಿತಸ್ಥರ ವಿರುಧ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ಆಗ್ರಹಿಸುತ್ತದೆ. 

  ಪ್ರತಿಭಟಿಸುವ ಹಕ್ಕನ್ನು ಧಮನಿಸುವ ರಾಜ್ಯ ಸರ್ಕಾರದ ನಡೆ ಖಂಡನೀಯ, ವಿದ್ಯಾರ್ಥಿಗಳ ಮೇಲೆ ಏಕಾಏಕಿ ಪೋಲಿಸರು ಲಾಠಿ ಬೀಸಿದ್ದು ಮಾರಣಾಂತಿಕ ಹಲ್ಲೆಯನ್ನು ನಡೆಸಿದ್ದಾರೆ. ಪ್ರತಿಭಟನಾ ನಿರತ ಹಲವಾರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿದ್ದು ಇದೊಂದು ಸರ್ಕಾರಿ ಪ್ರಾಯೋಜಿತ ಭಿನ್ನಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವೆನ್ನಬಹುದು. 

   ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ವಿರುಧ್ದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಈ ಮೊದಲಿಂದಲೇ ಹಲವಾರು ಹೋರಾಟಗಳನ್ನು ನಡೆಸಿದ್ದು, ವಿರೋಧ ಪಕ್ಷಗಳ ನಾಯಕರನ್ನು ಭೇಟಿ ಮಾಡಿ ಎನ್.ಇ.ಪಿ ಯ ಲೋಪದೋಷಗಳ ಕರಡು ಪ್ರತಿ ನೀಡಿದೆ. ವಿಧಾನಸೌಧ ಮುತ್ತಿಗೆ ನಡೆಸುವ ಕುರಿತು ಈ ಮೊದಲೇ ಪತ್ರಿಕಾಗೋಷ್ಠಿ ಕರೆದು ತಿಳಿಸಿದ್ದು, ಪೋಲಿಸ್ ಇಲಾಖೆಯಿಂದ ಅನುಮತಿ ಪಡೆದು ಪ್ರತಿಭಟನೆಗೆ ಮುಂದಾಗಿದ್ದು ಆದರೆ ಪೋಲಿಸರು ಹಾಗೂ ಸ್ಪೆಷಲ್ ಫೋರ್ಸ್ ತಂಡದಿಂದ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ್ದಾರೆ. ಇಲ್ಲಿಯವರೆಗೆ ಯಾವುದೇ ಪ್ರತಿಭಟನೆಗಳಲ್ಲಿ ಕಾಣಸಿಗದ ಸ್ಪೆಷಲ್ ಫೋರ್ಸ್ ತಂಡವನ್ನು ಯಾಕಾಗಿ ಈ ಪ್ರತಿಭಟನೆಗೆ ನಿಯೋಜಿಸಲಾಗಿತ್ತು ಹಾಗೂ ಇವರಿಗೆ ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸಲು , ಹಲ್ಲೆ ನಡೆಸಲು ಅನುಮತಿ ನೀಡಿದವರು ಯಾರು ಎಂಬುದನ್ನು ಇಲಾಖೆ ಸ್ಪಷ್ಟಪಡಿಸಬೇಕಾಗಿದೆ. ಈ ಸ್ಪೆಷಲ್ ಫೋರ್ಸ್ ತಂಡದವರು ವಿದ್ಯಾರ್ಥಿ ವಿದ್ಯಾರ್ಥಿನಿಯರ ಮೇಲೆ ಕೈ ಹಾಕಿ ಕೈ, ಕಾಲು, ಮುಖ, ತಲೆ, ಹೃದಯ ಭಾಗಗಳಿಗೆ ಪಂಚ್ ಗಳನ್ನು ನಡೆಸಿದ್ದು, ಲಾಠಿಯಿಂದ ಮಾರಣಾಂತಿಕವಾಗಿ ತಲೆಗೆ ಹೊಡೆದಿದ್ದರಿಂದ ಇಬ್ಬರು ವಿದ್ಯಾರ್ಥಿಗಳ ತಲೆ ಹೊಡೆದಿದೆ, ಇನ್ನೊಬ್ಬರ ಕಣ್ಣಿನ ಭಾಗಕ್ಕೆ ಗಾಯವಾಗಿದೆ. ಹಲವಾರು ವಿದ್ಯಾರ್ಥಿಗಳ ಕಾಲು, ಕೈ ಗಳಿಗೆ ತೀವ್ರ ಗಾಯಗಳಾಗಿವೆ. ಈ ರೀತಿಯಾಗಿ ಅಮಾನವೀಯವಾಗಿ ವರ್ತಿಸಿದ ಪೋಲಿಸರ ಹಾಗೂ ಸ್ಪೆಷಲ್ ಫೋರ್ಸ್ ತಂಡದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಥಾವುಲ್ಲ ಪುಂಜಾಲಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಕಾರ್ಯದರ್ಶಿ ಸರ್ಫರಾಝ್ ಗಂಗಾವತಿ ಹಾಗೂ ಹಲ್ಲೆಗೊಳಗಾದ ವಿದ್ಯಾರ್ಥಿಗಳಾದ ಹಫೀಝ್, ಮುಕ್ತಾರ್, ರಾಝಿಕ್ ಹಾಗು ಅರ್ಮಾನ್ ಉಪಸ್ಥಿತರಿದ್ದರು

Pages