ನ್ಯೂಸ್ ಉಬಾರ್:
ಪುಂಜಲಕಟ್ಟೆ ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕಾರಣದಲ್ಲಿ ಬಂದಿತರಾಗಿದ್ದ ಗಣೇಶ್( 32 ) ಹಾಗೂ ನವಾಜ್ (26 ) ಬಂಧಿತ ಆರೋಪಿಗಳಿಗೆ, ಬೆಳ್ತಂಗಡಿ ನ್ಯಾಯಾಲಯ ಶರತ್ತುಬದ್ಧ ಜಾಮೀನು ನೀಡಿದ್ದು, ನ್ಯಾಯಾಂಗ ಬಂಧನದಿಂದ ಬಿಡುಗಡೆಗೊಳಿಸಿದೆ.
ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಕುಟ್ಟಿ ಎಂ.ಕೆ ರವರು ಸಿಬ್ಬಂದಿಗಳೊಂದಿಗೆ ಸೋಣಂದೂರು ಶಾಲೆಯ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬೆಳ್ತಂಗಡಿ ಕಡೆಯಿಂದ ಬಂದ ಮಿನಿ ಟೆಂಪೋ ವಾಹನವನ್ನು ಪರಿಶೀಲಿಸಿದಾಗ ಆರೋಪಿಗಳು ಎರಡು ಹೋರಿ ಕರುಗಳನ್ನು ಯಾವುದೇ ಅಧಿಕೃತ ದಾಖಲಾತಿಗಳು ಇಲ್ಲದೆಯೆ ಸಾಗಾಟ ಮಾಡುತ್ತಿರುವ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು,
ಇವರಿಗೆ ಮಾನ್ಯ ಬೆಳ್ತಂಗಡಿ ಪ್ರಧಾನ ಸಿವಿಲ್ ಜಡ್ಜ್ ಮತ್ತು ಪ್ರಥಮ ಧರ್ಜೆ ದಂಡಾಧಿಕಾರಿಗಳವರ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದ್ದು, ಆರೋಪಿಗಳ ಪರವಾಗಿ ಬೆಳ್ತಂಗಡಿಯ ಯುವ ನ್ಯಾಯವಾದಿ ನವಾಝ್ ಷರೀಫ್ ಕಕ್ಕಿಂಜೆ ಮತ್ತು ಮುಮ್ತಾಝ್ ಬೇಗಂ ವಾದ ಮಂಡಿಸಿದ್ದರು. ತಂಡದಲ್ಲಿ ನ್ಯಾಯವಾದಿಗಳಾದ ಇರ್ಷಾದ್ ಮಡಂತ್ಯಾರ್ ಮತ್ತು ಅನೀಝ್ ತುರ್ಕಳಿಕೆ ಜೊತೆಗಿದ್ದರು