ಉಪ್ಪಿನಂಗಡಿ: ಜ.4, ಸೋಮವಾರ ದಿನಾರ್ ಗೋಲ್ಡ್ & ಡೈಮಂಡ್ಸ್ ಶುಭಾರಂಭ. - News Ubaar

ಇತ್ತೀಚಿನ ಸುದ್ದಿ

Subscribe

ಶನಿವಾರ, ಜನವರಿ 2, 2021

ಉಪ್ಪಿನಂಗಡಿ: ಜ.4, ಸೋಮವಾರ ದಿನಾರ್ ಗೋಲ್ಡ್ & ಡೈಮಂಡ್ಸ್ ಶುಭಾರಂಭ.

ನ್ಯೂಸ್ ಉಪ್ಪಿನಂಗಡಿ:ಜ.2 , ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್ ಮತ್ತು ಸುಳ್ಯದಲ್ಲಿ ಆಭರಣ ಉದ್ಯಮದಲ್ಲಿ ವಿಶ್ವಾಸಾರ್ಹ ಸೇವೆಯೊಂದಿಗೆ ಜನರ ಪ್ರೀತಿ ಗಳಿಸಿದ ಪ್ರಸಿದ್ಧ ಗೋಲ್ಡ್ ಜ್ಯುವೆಲ್ಲರಿ ಗ್ರೂಪ್ಸ್ ಆದ ದಿನಾರ್ ಗೋಲ್ಡ್ – ಡೈಮಂಡ್ಸ್ ಉಪ್ಪಿನಂಗಡಿಯ ಹಳೆ ಬಸ್ ನಿಲ್ದಾಣ ಬಳಿ ಜ. ೪ರಂದು ಶುಭಾರಂಭ ಗೊಳ್ಳಲಿದೆ. ದಿನಾರ್ ಗೋಲ್ಡ್ ಡೈಮಂಡ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಎ.ಪಿ ಅಬ್ದುಲ್ ಸಮದ್ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ.

ಗೋಲ್ಡ್ ವಿಭಾಗವನ್ನು ಮಾಣಿಲ ಶ್ರೀಧಾಮ ಕ್ಷೇತ್ರದ ಶ್ರೀಗಳಾದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ.ದೀನರ ಕನಾಮಾತೆ ದೇವಾಲಯ ಇದರ ಧರ್ಮ ಗುರುಗಳಾದ ಫಾ.ಅಬೆಲ್ ಲೋಬೊ ಡೈಮಂಡ್ಸ್ ವಿಭಾಗವನ್ನು ಉದ್ಘಾಟಿಸಲಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಹಸನ್ ಟವರ್‍ಸ್ ನ್ನು ಉದ್ಘಾಟಿಸಲಿದ್ದಾರೆ. ಪುತ್ತೂರು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ,ಉಪ್ಪಿನಂಗಡಿ ವರ್ತಕರ ಸಂಘದ ಅಧ್ಯಕ್ಷ ಹಾರೂನ್ ರಶೀದ್ ಅಗ್ನಾಡಿ,ಉಪ್ಪಿನಂಗಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮಠ,ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಯು ಟಿ. ತೌಸೀಫ್,ಮಾಲಿಕ್ ದಿನಾರ್ ಮಸೀದಿ ಅಧ್ಯಕ್ಷ ಮುಸ್ತಫಾ ಕೆಂಪಿ,ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನ ಅಧ್ಯಕ್ಷ ಬಿ.ಗಣೇಶ್ ಶೆಣೈ, ಸಹಸ್ರಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಕರುಣಾಕರ ಸುವರ್ಣ, ಗಿರಿಜಾ ಕ್ಲಿನಿಕ್ ನ ಡಾ.ರಾಜಾರಾಂ ಕೆ.ಬಿ.,ವಿಜಯಾ ವೈದ್ಯ ಶಾಲೆಯ ಜಗದೀಶ್ ಶೆಟ್ಟಿ, ಕೆಪಿಸಿಸಿ ಕಾರ್ಮಿಕ ಮಖಂಡ ನಜೀರ್ ಮಠ,ಹಸನ್ ಟವರ್ ಮಾಲಕ ಮಹಮ್ಮದ್ ಇಕ್ಬಾಲ್,ಸಾಮಾಜಿಕ ಧುರೀಣ ಅಝೀಝ್ ಬಸ್ತಿಕಾರ್, ದುರ್ಗಾ ಟೆಕ್ಸ್ ಟೈಲ್ಸ್ ಮಾಲಕ ಮೋಹನ್ ಚೌಧರಿ, ಮೊದಲಾದವರು ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ದಿನಾರ್ ಗೋಲ್ಡ್ ಉಪ್ಪಿನಂಗಡಿ ಮಳಿಗೆ ಪ್ರಾರಂಭೋತ್ಸದ ಪ್ರಯುಕ್ತ ಆಗಮಿಸಿದ ಗ್ರಾಹಕರಿಗೆ ವಿಶೇಷ ರೀತಿಯ ಬಹುಮಾನ ಗೆಲ್ಲುವ ಯೋಜನೆಯೊಂದಿಗೆ ಪ್ರತೀ ಗಂಟೆಗೆ ಅದೃಷ್ಟ ಕೂಪನ್ ಗೆಲ್ಲುವ ಅವಕಾಶವಿದೆ. ಇದರಲ್ಲಿ ವಿಜೇತರಾದವರಿಗೆ ಫ್ರಿಡ್ಜ್ ,ವಾಶಿಂಗ್ ಮೆಶಿನ್, ಮಿಕ್ಸಿ,ಹಾಗೂ ಇನ್ನಿತರ ಬಹುಮಾನಗಳು ನೀಡಲಾಗುವುದು.

Pages