ಒಳಮೊಗ್ರು ಗ್ರಾಮ ಪಂಚಾಯತ್ ಫಲಿತಾಂಶ: ಕಾಂಗ್ರೇಸ್ –ಬಿಜೆಪಿ ಸಮಬಲ | ಎಸ್ ಡಿ ಪಿ ಐ ನಿರ್ಣಾಯಕ - News Ubaar

ಇತ್ತೀಚಿನ ಸುದ್ದಿ

Subscribe

ಬುಧವಾರ, ಡಿಸೆಂಬರ್ 30, 2020

ಒಳಮೊಗ್ರು ಗ್ರಾಮ ಪಂಚಾಯತ್ ಫಲಿತಾಂಶ: ಕಾಂಗ್ರೇಸ್ –ಬಿಜೆಪಿ ಸಮಬಲ | ಎಸ್ ಡಿ ಪಿ ಐ ನಿರ್ಣಾಯಕ

 ನ್ಯೂಸ್ ಉಪ್ಪಿನಂಗಡಿ: ಡಿ.31, ಕಳೆದ ಬಾರಿ ಬಿಜೆಪಿ ತೆಕ್ಕೆಯಲ್ಲಿದ್ದ ಒಳಮೊಗ್ರು ಗ್ರಾಮ ಪಂಚಾಯತ್ ಆಡಳಿತ ಜಿದ್ದಾಜಿದ್ದಿನ ಹೋರಾಟದಲ್ಲಿ ಕಾಂಗ್ರೇಸ್ –ಎಸ್ ಡಿ ಪಿ ಐ ಮೈತ್ರಿ ಕೂಟದ ಪಾಲಾಗಿದೆ. 15 ಸದಸ್ಯ ಬಲದ ಈ ಪಂಚಾಯತ್ ನಲ್ಲಿ ಬಿಜೆಪಿ ಹಾಗೂ ಕಾಂಗ್ರೇಸ್ ಬೆಂಬಲಿತರು ತಲಾ 7 ಸ್ಥಾನಗಳನ್ನುಪಡೆದಿದ್ದಾರೆ . ನಿರ್ಣಾಯಕ ಎಣಿಸಿದ ಒಂದು ಸ್ಥಾನ ಇದೇ ಮೊದಲ ಬಾರಿಗೆ ಅಲ್ಲಿ ಖಾತೆ ತೆರೆದ  ಎಸ್ ಡಿ ಪಿ ಐ ಪಕ್ಷದ ಬೆಂಬಲಿತ ಅಭ್ಯರ್ಥಿ ಪಾಲಾಗಿದೆ.

ಒಟ್ಟು 14 ಸ್ಥಾನಗಳಿಗೆ ಚುನಾವಣೆ ನಡೆದಿದ್ದೂ , ಉಳಿದ ಒಂದು ಸ್ಥಾನದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ವನಿತಾ ಅವಿರೋಧವಾಗಿ ಆಯ್ಕೆಯಾಗಿದ್ದರು

ಒಂದನೇ ವಾರ್ಡಿನಲ್ಲಿ ಕಾಂಗ್ರೇಸ್ ಎಸ್ ಡಿ ಪಿ ಐ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಅಬ್ದುಲ್ ಸಿರಾಜುದ್ದೀನ್ ಗೆಲುವು ಸಾಧಿಸಿದ್ದಾರೆ . ಈ ಒಂದು ಅಭ್ಯರ್ಥಿಯ ಮಟ್ಟಿಗೆ ಕಾಂಗ್ರೇಸ್ ಬೆಂಬಲಿತರು ಎಸ್ ಡಿ ಪಿ ಐ ಬೆಂಬಲಿತ ಅಭ್ಯರ್ಥಿ ಜತೆ ಮೈತ್ರಿ ಮಾಡಿಕೊಂಡು ಚುನಾವಣ ಕಣಕ್ಕೆ ದುಮಿಕ್ಕಿದ್ದರು. ಹಾಗಾಗಿ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಮಾಡುವ ಸಂದರ್ಭ ಇವರು ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗೆ ಮತ ನೀಡಲಿರುವುದರಿಂದ ಪಂಚಾಯತ್ ಅಧಿಕಾರ ಬಿಜೆಪಿ ಹಿಡಿತದಿಂದ ಕಾಂಗ್ರೇಸ್ ತೆಕ್ಕೆಗೆ ಬಂದಿದೆ.

Pages