ಎಸ್ಕೆಎಸ್ಸೆಸ್ಸೆಫ್ ಅಬುಧಾಬಿ ಘಟಕದ ಸಾರಥ್ಯದಲ್ಲಿ `ಗಡಿನಾಡ ಸಹಚರ’ ಆಂಬ್ಯುಲೆನ್ಸ್ ಕುದ್ದುಪದವಿನಲ್ಲಿ ಲೋಕಾರ್ಪಣೆ - News Ubaar

ಇತ್ತೀಚಿನ ಸುದ್ದಿ

Subscribe

ಮಂಗಳವಾರ, ಡಿಸೆಂಬರ್ 29, 2020

ಎಸ್ಕೆಎಸ್ಸೆಸ್ಸೆಫ್ ಅಬುಧಾಬಿ ಘಟಕದ ಸಾರಥ್ಯದಲ್ಲಿ `ಗಡಿನಾಡ ಸಹಚರ’ ಆಂಬ್ಯುಲೆನ್ಸ್ ಕುದ್ದುಪದವಿನಲ್ಲಿ ಲೋಕಾರ್ಪಣೆ

ನ್ಯೂಸ್ ಉಪ್ಪಿನಂಗಡಿ: ಡಿ.29, ಕರ್ನಾಟಕ ರಾಜ್ಯ ಎಸ್ಕೆಎಸ್ಸೆಸ್ಸೆಫ್ ಅಬುಧಾಬಿ ಘಟಕದ ಸಾರಥ್ಯದಲ್ಲಿ ಗಡಿನಾಡ ಸಹಚರ ಆಂಬ್ಯುಲೆನ್ಸ್ ಸೇವೆಯನ್ನು ವಿಟ್ಲ ಸಮೀಪದ ಕುದ್ದುಪದವಿನಲ್ಲಿ ಲೋಕಾರ್ಪಣೆಗೊಳಿಸಲಾಯಿತು.
  
ಅಮೀರ್ ತಂಙಳ್ ಕಿನ್ಯ ಉದ್ಘಾಟಿಸಿ ದುವಾ ಗೈದರು. ಮುಖ್ಯ ಪ್ರಭಾಷಣಗೈದ ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿಯವರು ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಎಂಬ ಸಂಘಟನೆ ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪಿಸಲ್ಪಟ್ಟು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೇಶ ವಿಭಜನೆಯ ಸಂದರ್ಭದಲ್ಲಿ ನಾವು ಭಾರತವನ್ನು ಬಿಟ್ಟುಹೋಗಲಾರೆವು ಎಂದು ಘೋಷಣೆ ಮಾಡಿದ ಹೆಮ್ಮೆಯ ಸಂಘಟನೆಯಾಗಿದೆ. ಅದರ ವಿದ್ಯಾರ್ಥಿ ಸಂಘಟನೆ ಎಸ್ಕೆಎಸ್ಸೆಸ್ಸೆಫ್ ಆಗಿದ್ದು ಇದರ ತುರ್ತು ಸೇವಾ ಘಟಕವಾದ ವಿಖಾಯ ತಂಡವು ಪ್ರಾಕೃತಿಕ ವಿಕೋಪದ ಸಂದರ್ಭಗಳಲ್ಲಿ ಸೇವೆ ನೀಡಿದೆ ಎಂದ ಅವರು ಎಸ್ಕೆಎಸ್ಸೆಸ್ಸೆಫ್ ಅಬುಧಾಬಿ ಘಟಕದ ಸೇವೆಯನ್ನು ಶ್ಲಾಘಿಸಿದರು.

ಜಿ.ಪಂ ಸದಸ್ಯ ಮಹಮ್ಮದ್ ರವರು ಮಾತನಾಡಿ ಆಂಬುಲೆನ್ಸ್ ಸೇವೆಯನ್ನು ಒದಗಿಸಿಕೊಟ್ಟ ಅಬುಧಾಬಿ ಎಸ್ಕೆಎಸ್ಸೆಸ್ಸೆಫ್‌ನ ಸೇವೆಯನ್ನು ಶ್ಲಾಘಿಸಿದರು. ಶ್ರೀನಿವಾಸ ರೈ ಮಾತನಾಡಿ ಕೇಪು ಗ್ರಾಮ ಪಕ್ಷ-ಜಾತಿಗಿಂತ ಮಿಗಿಲಾಗಿ ಮಾನವೀಯತೆಗೆ ಹೆಚ್ಚಿನ ಆದ್ಯತೆಯನ್ನು ಕಲ್ಪಿಸಿದ ಊರಾಗಿದೆ ಎಂದು ಹೇಳಿದರು. ಹನೀಫ್ ಹರಿಯಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಕೇರಳ-ಕರ್ನಾಟಕದ ಗಡಿ ಭಾಗವಾದ ಈ ಪ್ರದೇಶದ ಜನರ ಬಹುಕಾಲದ ಬೇಡಿಕೆಯೊಂದು ಇವತ್ತು ಈಡೇರಿದಂತಾಗಿದೆ. ಇದರ ಸೇವೆ ಬಡವರಿಗೆ ಸಂಪೂರ್ಣ ಉಚಿತವಾಗಿರುತ್ತದೆ ಎಂದು ಹೇಳಿದರು.

ಎಸ್ಕೆಎಸ್ಸೆಸ್ಸೆಫ್ ದ.ಕ ಜಿಲ್ಲಾ ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ವಿಟ್ಲ ವಲಯ ಕಾರ್ಯದರ್ಶಿ ರಫೀಕ್ ಮುಸ್ಲಿಯಾರ್ ಕಡಂಬು, ಕೇಪು ಗ್ರಾ.ಪಂ ಮಾಜಿ ಅಧ್ಯಕ್ಷ ಶ್ರೀನಿವಾಸ ರೈ, ಗ್ರಾ.ಪಂ ಮಾಜಿ ಸದಸ್ಯರಾದ ಬಾಲಕೃಷ್ಣನ್ ಶೆಟ್ಟಿ ಬೆಂಗ್ರೋಡಿ, ಮರಕ್ಕಿಣಿ ಮುದರ್ರಿಸ್ ನೌಫಲ್ ಹುಸೈನ್ ಫೈಝಿ, ಅಡ್ಯನಡ್ಕ ಮುದರ್ರಿಸ್ ಅಬ್ದುಲ್ಲಾ ರಹ್ಮಾನಿ, ಕುದ್ದುಪದವು ಇಮಾಮ್ ಮುನೀರ್ ಅಝ್ಹರಿ, ಶಾಹಜಾನ್ ಅಝ್ಹರಿ, ಮರಕ್ಕಿಣಿ ಜಮಾಅತ್ ಅಧ್ಯಕ್ಷರಾದ ಷರೀಫ್ ಮೂಸಾ, ವೈದ್ಯರಾದ ರಮೇಶ್ ಕುಮಾರ್ ಬಿಳಿರಾಯ, ಗೋಪಾಲ ಪಾಟಾಳಿ, ಶ್ರೀನಿವಾಸ್ ಶೆಟ್ಟಿ ಬೆಂಗ್ರೋಡಿ, ಅಲ್‌ಹುದಾ ಚಾರಿಟಿ ಫೌಂಡೇಶನ್ ಮುಚ್ಚಿರಪದವು ಇದರ ಅಧ್ಯಕ್ಷ ಶಾಫಿ ಮುಚ್ಚಿರಪದವು, ಅಬ್ದುಲ್ ರಝಾಕ್ ಸಾರಡ್ಕ, ತಾಜ್ ಗಡಿನಾಡು, ಪೊಡಿಯ ಹಾಜಿ ಮೈರ, ಎನ್‌ಐವೈಎ ಅಧ್ಯಕ್ಷ ಕಲಂದರ್ ಮಂಜನಡ್ಕ, ಅಡ್ಯನಡ್ಕ ಮಸೀದಿ ಅಧ್ಯಕ್ಷ ಉಸ್ಮಾನ್ ಮರಕ್ಕಿಣಿ, ಮುರಳೀಧರ್ ರೈ ಕೇಪು, ಎಸ್ಕೆಎಸ್ಸೆಸ್ಸೆಫ್ ಕುದ್ದುಪದವು ಶಾಖಾಧ್ಯಕ್ಷ ಮಹಮ್ಮದ್ ಎಸ್, ಮರಕ್ಕಿಣಿ ಶಾಖಾಧ್ಯಕ್ಷ ಇಬ್ರಾಹಿಂ ಕೆದುಮೂಲೆ ಸೇರಿದಂತೆ ನೂರಾರು ಜನರ ಸಮ್ಮುಖದಲ್ಲಿ ಕುದ್ದುಪದವು ಜಂಕ್ಷನ್‌ನಲ್ಲಿ ಲೋಕಾರ್ಪಣೆ ಮಾಡಲಾಯಿತು. ಸ್ಥಳೀಯ ಶಾಖಾ ಮುಖಂಡರುಗಳಿಗೆ ಆಂಬುಲೆನ್ಸ್ ಕೀ ಹಸ್ತಾಂತರ ಮಾಡಲಾಯಿತು.

Pages