ಮೂಳೂರು: ಕಂಠಪಾಟ ಮಾಡಿ 9 ಗಂಟೆಯ ಅವಧಿಯಲ್ಲಿ ಪೂರ್ತಿ ಕುರ್ಆನ್ ಪಠಿಸಿದ 15ವರ್ಷದ ಬಾಲಕ - News Ubaar

ಇತ್ತೀಚಿನ ಸುದ್ದಿ

Subscribe

ಮಂಗಳವಾರ, ಡಿಸೆಂಬರ್ 29, 2020

ಮೂಳೂರು: ಕಂಠಪಾಟ ಮಾಡಿ 9 ಗಂಟೆಯ ಅವಧಿಯಲ್ಲಿ ಪೂರ್ತಿ ಕುರ್ಆನ್ ಪಠಿಸಿದ 15ವರ್ಷದ ಬಾಲಕ

ನ್ಯೂಸ್ ಉಪ್ಪಿನಂಗಡಿ: ಡಿ.29, ಮೂಳೂರು ಅಲ್ಇಹ್ಸಾನ್ ಹಿಫ್ಲ್ ವಿದ್ಯಾರ್ಥಿ 15 ವರ್ಷ ಪ್ರಾಯದ ಮುಹಮ್ಮದ್ ಮುಝಮ್ಮಿಲ್
ತಾನು ಕಂಠಪಾಠ ಮಾಡಿದ ಪವಿತ್ರ ಕುರ್ಆನಿನ ಮೂವತ್ತು ಖಾಂಡವನ್ನೂ ತನ್ನ ಉಸ್ತಾದರ ಮುಂದೆ ಕೇವಲ 9 ಗಂಟೆಯ ಅವಧಿಯಲ್ಲಿ ಪಠಿಸಿ ಪೂರ್ತಿಗೊಳಿಸಿದ್ದಾರೆ.

ಮೂಳೂರಿನ ಅಲ್ಇಹ್ಸಾನ್ ಹಿಫ್ಲ್ ವಿಭಾಗದ ವಿದ್ಯಾರ್ಥಿಯಾಗಿರುವ ಮುಝಮ್ಮಿಲ್, ಕೇವಲ ಒಂಬತೇ ತಿಂಗಳಲ್ಲಿ 600 ಪುಟಗಳು,114 ಅಧ್ಯಾಯಗಳು,6666 ಶ್ಲೋಕಗಳಿರುವ ಪೂರ್ತಿ ಪವಿತ್ರ ಗ್ರಂಥವನ್ನು ತಪ್ಪು ಬಾರದಂತೆ ಓದಿ ಮುಗಿಸುವ ಮೂಲಕ ಗಮನಸೆಳೆದಿದ್ದಾನೆ.

ಪ್ರಾರಂಭದಿಂದ ಅಂತ್ಯದವರೆಗೆ ಒಮ್ಮೆಯೂ ಕುರ್ಆನ್ ನೋಡಲು ಅವಕಾಶವಿರದೆ,ಬೆಳಿಗ್ಗೆ 6.30 ಕ್ಕೆ ಕುರ್ಆನ್ ಪಠಣ ಆರಂಭಿಸಿದ ಮುಝಮ್ಮಿಲ್, ಊಟ, ತಿಂಡಿ ಹಾಗು ಅತ್ಯವಶ್ಯ ಕೆಲಸಕ್ಕೆ 4 ಗಂಟೆ ವಿನಿಯೋಗಿಸಿ ಸಂಜೆ 7.30ರ ವೇಳೆಗೆ ಒಟ್ಟು 9ಗಂಟೆಯ ಅವಧಿಯಲ್ಲಿ ತಾನು ಕಂಠಪಾಠ ಮಾಡಿದ ಸಂಪೂರ್ಣ ಕುರ್ಆನನ್ನು ಪಠಿಸಿ ಉಸ್ತಾದರು ಹಾಗೂ ಹಿಫ್ಲ್ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಖತಮ್ ಸಮಾಪನ ಗೊಳಿಸಲಾಯಿತು.

ಅಸಿಸ್ಟೆಂಟ್ ಮ್ಯಾನೇಜರ್ ಸಿದ್ದೀಕ್ ಸಅದಿ ಉಸ್ತಾದ್, ದಅವ ಕಾಲೇಜು ಮುಖ್ಯಸ್ಥರಾದ ಸ್ವಾಬಿರ್ ಸಅದಿ ಉಸ್ತಾದ್, ಇತರ ಸಿಬ್ಬಂದಿಗಳಾದ ಹಾಫಿಲ್ ಹಾರಿಸ್ ಸಅದಿ, ಹಾಫಿಲ್ ರಫೀಕ್ ನಿಝಾಮಿ, ಶಫೀಕ್ ಅಹ್ಸನಿ, ಹಸೀಬ್ ಅಹ್ಸನಿ ಹಾಗೂಹಿಫ್ಲ್ ವಿದ್ಯಾರ್ಥಿಗಳು ಹಾಜರಿದ್ದರು. ಖತ್ಮುಲ್ ಕುರ್ಆನ್ ದುಆದೊಂದಿಗೆ ವಿದ್ಯಾರ್ಥಿಗೆ ಶುಭ ಹಾರೈಸಿ ಸನ್ಮಾನಿಸಲಾಯಿತು.

Pages