ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಮಾನಭಂಗಕ್ಕೆ ಯತ್ನ ಆರೋಪ :ಹಿಂಜಾವೇ ಮುಖಂಡ ಗುರುಪ್ರಸಾದ್ ಪಂಜ ಪೊಲೀಸರ ವಶಕ್ಕೆ. - News Ubaar

ಇತ್ತೀಚಿನ ಸುದ್ದಿ

Subscribe

ಬುಧವಾರ, ಅಕ್ಟೋಬರ್ 31, 2018

ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಮಾನಭಂಗಕ್ಕೆ ಯತ್ನ ಆರೋಪ :ಹಿಂಜಾವೇ ಮುಖಂಡ ಗುರುಪ್ರಸಾದ್ ಪಂಜ ಪೊಲೀಸರ ವಶಕ್ಕೆ.



ಟ್ರೂ ಮೀಡಿಯಾ ನ್ಯೂಸ್,ಅ,31:
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಪೋಲೀಸರು ಹಿಂದೂ ಜಾಗರಣ ವೇದಿಕೆ ಮುಖಂಡ ಗುರುಪ್ರಸಾದ್ ಪಂಜ ಅವರನ್ನು ವಶಕ್ಕೆ ಪಡೆದಿದ್ದಾರೆ.

ಗುರುಪ್ರಸಾದ್ ವಿರುದ್ಧ ಚೈತ್ರಾ ಕುಂದಾಪುರ ಮಾನಭಂಗ ಯತ್ನ ಪ್ರಕರಣ ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ಗುರುಪ್ರಸಾದ್ ಅವರನ್ನು ಪೊಲೀಸರು ಇಂದು ಬುಧವಾರ ವಶಕ್ಕೆ ಪಡೆದಿದ್ದಾರೆ.
ಫೇಸ್ ಬುಕ್ ನಲ್ಲಿ ಚೈತ್ರಾ ಕುಂದಾಪುರ ಹಾಗೂ ಗುರುಪ್ರಸಾದ್ ನಡುವೆ ಆರಂಭವಾಗಿದ್ದ ಫೇಸ್ ಬುಕ್ ವಾರ್ ಬೀದಿ ಜಗಳಕ್ಕೆ ಎಡೆಮಾಡಿತ್ತು. ಚೈತ್ರಾ ಕುಂದಾಪುರ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗುರುಪ್ರಸಾದ್ ಪಂಜ ಹಾಗೂ ಅತನ ಸ್ನೇಹಿತರು ಮತ್ತು ಚೈತ್ರಾ ಕುಂದಾಪುರ ತಂಡದವರ ನಡುವೆ ಮಾರಾಮಾರಿ ನಡೆದಿತ್ತು.

ಈ ಸಂದರ್ಭದಲ್ಲಿ ಗುರುಪ್ರಸಾದ್ ಪಂಜ ಅವರ ತಲೆಗೆ ಗಂಭೀರ ಗಾಯವಾಗಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ನಡುವೆ ಚೈತ್ರಾ ಕುಂದಾಪುರ ನೀಡಿದ ಅತ್ಯಾಚಾರ ಯತ್ನ ದೂರಿನ ಮೇಲೆ ಸುಬ್ರಹ್ಮಣ್ಯ ಪೋಲೀಸರು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುರುಪ್ರಸಾದ್ ರನ್ನು ಈಗ ವಶಕ್ಕೆ ಪಡೆದಿದ್ದಾರೆ‌.

Pages