ಮಂಗಳೂರಿನ ಕೆಂಡದಂತೆ ಸುಡುವ ಬಿಸಿಲಿನಲ್ಲಿ ಸಹಸ್ರಾರು ಮುಸ್ಲಿಂ ಸಮುದಾಯದವರು, ಉಪವಾಸದ ಸ್ಥಿತಿಯಲ್ಲಿಯೇ, ಉಲಮಾಗಳ ನೇತೃತ್ವದಲ್ಲಿ ಕ್ಲಾಕ್ ಟವರ್ ವರೆಗೆ ಕಾಲ್ನಡಿಗೆ ನಡೆಸಿದರು. ಪ್ರತಿಭಟನಾಕಾರರು ಕೇಂದ್ರ ಸರ್ಕಾರದ "ಅನ್ಯಾಯಕಾರೀ ವಕ್ಫ್ ತಿದ್ದುಪಡಿ ಮಸೂದೆ" ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಜಾಥಾ ಯಾವುದೇ ಸಂಘಟನೆಯ ವಿಶೇಷ ಧ್ವಜದೊಂದಿಗೆ ನಡೆಯದೇ, ಸಂಪೂರ್ಣವಾಗಿ ರಾಷ್ಟ್ರೀಯ ತ್ರಿವರ್ಣ ಪತಾಕೆಯಡಿ ನಡೆದಿದ್ದು ದೇಶಾಭಿಮಾನ ಮತ್ತು ಒಗ್ಗಟ್ಟಿನ ಪ್ರತೀಕವಾಯಿತು. ಇದರಿಂದ, ಈ ಹೋರಾಟ ಯಾವುದೇ ಒಂದು ಸಮುದಾಯ ಅಥವಾ ಸಂಘಟನೆಯದಲ್ಲ, ಎಲ್ಲಾ ನ್ಯಾಯಪ್ರಿಯ ನಾಗರಿಕರ ಹೋರಾಟ ಎಂಬ ಸಂದೇಶ ನೀಡಲಾಯಿತು.
ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡ ಮುಸ್ಲಿಂ ಧರ್ಮಗುರುಗಳು ಮತ್ತು ಸಮಾಜದ ಪ್ರಮುಖ ವ್ಯಕ್ತಿಗಳು, ವಕ್ಫ್ ತಿದ್ದುಪಡಿ ಕಾಯ್ದೆಯ ಪರಿಣಾಮಗಳು ಮತ್ತು ಮುಸ್ಲಿಂ ಸಮುದಾಯದ ಮೇಲೆ ಬರುವ ಪ್ರತಿಕೂಲ ಪರಿಣಾಮಗಳನ್ನು ವಿವರಿಸಿದರು. ಕೇಂದ್ರ ಸರ್ಕಾರದ ಈ ನಿರ್ಧಾರ ಮೌಲಾನಾ, ಉಲಮಾಗಳು ಹಾಗೂ ಜನ ಸಾಮಾನ್ಯರಿಂದ ತೀವ್ರ ವಿರೋಧಕ್ಕೆ ಗುರಿಯಾಗಿದೆ.


