ಬೆಳ್ತಂಗಡಿ: ಪವಿತ್ರ ರಂಝಾನ್ ತಿಂಗಳ ಸಂದರ್ಭದಲ್ಲಿ ಸರಳಿಕಟ್ಟೆ ಜುಮ್ಮಾ ಮಸೀದಿ ವ್ಯಾಪ್ತಿಯ 175 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು. ಸರಳಿಕಟ್ಟೆ ಮಸೀದಿಯ ಖತೀಬ್ ಬಹು. ಅಬ್ದುರ್ರಹೀಂ ಅಝ್ಹರಿ ಸಖಾಫಿಯವರು ದುವಾ ನೆರವೇರಿಸುವ ಮೂಲಕ ಮಸೀದಿ ವಠಾರದಲ್ಲಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮವನ್ನು ಸರಳಿಕಟ್ಟೆ ಗೈಸ್ ಸಂಘಟನೆಯು ಸ್ಥಳೀಯ ದಾನಿಗಳ ಸಹಕಾರದಿಂದ ಆಯೋಜಿಸಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ನೆರವಿನ ಹಸ್ತ ಚಾಚುವ ಮಹತ್ತ್ವದ ಸೇವೆಯನ್ನು ನೆರವೇರಿಸಿದೆ. ಕಿಟ್ ವಿತರಣೆಯ ಜವಾಬ್ದಾರಿಯನ್ನು ಸಂಘಟನೆಯ ಪದಾಧಿಕಾರಿಗಳು ಸ್ವತಃ ತಳಮಟ್ಟದಲ್ಲಿ ಕಾರ್ಯ ನಿರ್ವಹಿಸಿ, ವಾಹನಗಳ ಮೂಲಕ ಮನೆಮನೆಗೆ ತಲುಪಿಸಿದರು.
ಇದೇ ಸಂದರ್ಭದಲ್ಲಿ ಸರಳಿಕಟ್ಟೆ ಗೈಸ್ ಸಂಘಟನೆಯ ಸಮಾಜಮುಖಿ ಕಾರ್ಯಗಳನ್ನು ಪ್ರಸ್ತಾಪಿಸಿ, ಸದಸ್ಯರು ಜಮಾಅತ್ ವ್ಯಾಪ್ತಿಯ ಜನರ ಚಿಕಿತ್ಸಾ ವೆಚ್ಚ, ನಿರ್ಗತಿಕರಿಗೆ ಸಹಾಯ, ಮನೆ ನಿರ್ಮಾಣ ಹಾಗೂ ಮದುವೆ ನೆರವಿನಂತಹ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿರುವುದನ್ನು ಹೈಲೈಟ್ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು:
ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಪಿ.ಎಂ. ಅಬ್ದುಲ್ ಹಮೀದ್
ಪ್ರಧಾನ ಕಾರ್ಯದರ್ಶಿ ಅಬ್ದುಲ್ಲತೀಫ್ ಪಿ.ಎಸ್
ಜೊತೆ ಕಾರ್ಯದರ್ಶಿ ಆಸಿಫ್ ಪುಯಿಲ
ಸಮಿತಿ ಸದಸ್ಯರು: ಅಬ್ಬಾಸ್ ಮಡಿಕೆರೆಬೆಟ್ಟು, ನಾಸಿರ್ ಎಸ್, ಸಮದ್ ಎಸ್
ಉದ್ಯಮಿಗಳು: ಅಶ್ರಫ್ ಬಂಡಾಡ್, ಮುಸ್ತಫಾ ಕಾಜಿನಳಿಕೆ, ಉನೈಸ್ ಚಿಂಗಾಣಿಬೆಟ್ಟು, ನವಾಝ್ ಪಿ.ಎಸ್. ಹೈದರ್ ಗುಂಪಕಲ್ಲು
ಜಮಾಅತ್ ಸದಸ್ಯರು: ಮುಸ್ತಫಾ ಕುರುಬರಪಾಲು, ನೌಮನ್ ಸರಳಿಕಟ್ಟೆ, ಖಾಸಿಂ ಮೇಗಿನಪುಯಿಲ, ಅಬ್ಬಾಸ್ ನೆಲ್ಲಿಪಳಿಕೆ
ರಂಝಾನ್ ತಿಂಗಳ ಆತ್ಮಸತ್ಪರೀಕ್ಷೆ ಮತ್ತು ಪರೋಪಕಾರದ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು, ಈ ರೀತಿಯ ಸೇವಾಕಾರ್ಯಗಳು ಇನ್ನಷ್ಟು ಪ್ರೇರಣೆಯ ಮೂಲವಾಗಲಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟರು.
