ಪುತ್ತೂರು: ಬಸ್ ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ – ಮಹಿಳೆ ಮತ್ತು 3 ವರ್ಷದ ಮಗು ಮೃತ್ಯು - News Ubaar

ಇತ್ತೀಚಿನ ಸುದ್ದಿ

Subscribe

ಭಾನುವಾರ, ಮಾರ್ಚ್ 2, 2025

ಪುತ್ತೂರು: ಬಸ್ ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ – ಮಹಿಳೆ ಮತ್ತು 3 ವರ್ಷದ ಮಗು ಮೃತ್ಯು

ಪುತ್ತೂರು: ಪುತ್ತೂರಿನ ಮಂಜಲಡ್ಪುವಿನಲ್ಲಿ ಬಸ್ ಹಾಗೂ ಆಟೋ ರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಅಪಘಾತದಲ್ಲಿ ಕುಂಬ್ರ ಗಟ್ಟಮನೆ ನಿವಾಸಿಯಾದ ರಿಕ್ಷಾ ಚಾಲಕ ಕೂರ್ನಡ್ಕ ಬಶೀರ್ ಅವರ ಅತ್ತೆ ಜಮೀಲಾ ಹಾಗೂ ಅವರ ನಾಲ್ಕುವರೆ ವರ್ಷದ ಮಗುವಾದ ತಮ್ಸೀರ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.


ಅಷ್ಟೇ ಅಲ್ಲದೆ, ರಿಕ್ಷಾ ಚಾಲಕ ಬಶೀರ್, 3 ವರ್ಷದ ಝಾಹೀದ್ ಹಾಗೂ ಬಲ್ಕೀಸ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ.


ಘಟನೆಯ ಕುರಿತು ಮಾಹಿತಿ ಪಡೆದ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.



Pages