New FASTag-ಇಂದಿನಿಂದ ಹೊಸ ಫಾಸ್ಟ್ ಟ್ಯಾಗ್ ನಿಯಮ ಜಾರಿ; ಇಲ್ಲಿದೆ ಪ್ರಮುಖ ಆರು ಬದಲಾವಣೆಗಳ ಮಾಹಿತಿ - News Ubaar

ಇತ್ತೀಚಿನ ಸುದ್ದಿ

Subscribe

ಸೋಮವಾರ, ಫೆಬ್ರವರಿ 17, 2025

New FASTag-ಇಂದಿನಿಂದ ಹೊಸ ಫಾಸ್ಟ್ ಟ್ಯಾಗ್ ನಿಯಮ ಜಾರಿ; ಇಲ್ಲಿದೆ ಪ್ರಮುಖ ಆರು ಬದಲಾವಣೆಗಳ ಮಾಹಿತಿ


ಹೊಸದಿಲ್ಲಿ: ಹೊಸ ಫಾಸ್ಟ್ ಟ್ಯಾಗ್ ನಿಯಮಗಳನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಇಂದಿನಿಂದ ಜಾರಿಗೆ ತರುತ್ತಿದೆ. ದೇಶದಾದ್ಯಂತ ಟೋಲ್ ಪ್ಲಾಜಾಗಳಲ್ಲಿ ಆಗುವ ವಂಚನೆಯನ್ನು ಕಡಿಮೆ ಮಾಡಲು ಮತ್ತು ವಹಿವಾಟುಗಳನ್ನು ಸುಗಮಗೊಳಿಸುವ ಉದ್ದೇಶದಿಂದ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ.


ಪ್ರಮುಖ ಆರು ಹೊಸ ನಿಯಮಗಳು:
1) ಫಾಸ್ಟ್ ಟ್ಯಾಗ್ ನಿಷ್ಕ್ರಿಯ
ಟೋಲ್ ಹತ್ತಿರವಾಗುವವರೆಗೆ ಫಾಸ್ಟ್ ಟ್ಯಾಗ್ ನಿಷ್ಕ್ರಿಯವಾಗಿದ್ದರೆ, ಹಣ ಪಾವತಿ ಆಗುವುದಿಲ್ಲ. 10 ನಿಮಿಷ ಮೊದಲು ನಿಷ್ಕ್ರಿಯವಾಗಿದ್ದರೂ ಹಣ ಪಾವತಿ ಆಗುವುದಿಲ್ಲ.


2) 70 ನಿಮಿಷ ಗ್ರೇಸ್ ಪಿರಿಯಡ್
ಫಾಸ್ಟ್ ಟ್ಯಾಗ್ ಬಳಕೆದಾರರಿಗೆ ಸುಲಭ ಮಾಡುವ ಸಲುವಾಗಿ, 70 ನಿಮಿಷ ಗ್ರೇಸ್ ಪಿರಿಯಡ್, ಅಂದರೆ ಟೋಲ್ ದಾಟುವ 70 ನಿಮಿಷ ಮೊದಲು ಫಾಸ್ಟ್ ಟ್ಯಾಗ್ ಸಕ್ರಿಯ ಮಾಡಲು ಸಮಯಾವಕಾಶ ನೀಡಲಾಗಿದೆ.


3) ಎರಡು ಬಾರಿ ಟೋಲ್ ಕಟ್ಟಬೇಕು
ಫಾಸ್ಟ್ ಟ್ಯಾಗ್ ಟೋಲ್ ದಾಟುವ ಮುನ್ನ ಸಕ್ರಿಯ ಆಗದೇ ಇದ್ದರೆ, ಎರಡು ಬಾರಿ ಟೋಲ್ ಕಟ್ಟಬೇಕು. ಆದರೆ 10 ನಿಮಿಷ ಮೊದಲು ರೀಚಾರ್ಜ್ ಮಾಡಿದ್ದರೆ, ಒಂದು ಬಾರಿ ದಂಡದ ಹಣ ವಾಪಸ್ (ರಿಫಂಡ್) ಮಾಡಲು ಮನವಿ ಮಾಡಬಹುದಾಗಿದೆ.


4) ಹೆಚ್ಚುವರಿ ಶುಲ್ಕ ಪಾವತಿ
ಟೋಲ್ ರೀಡರ್ ನಲ್ಲಿ ವಾಹನ ದಾಟಿದ ಮೇಲೆ, ಟೋಲ್ ನಲ್ಲಿ ಹಣ ಪಾವತಿ 15 ನಿಮಿಷಕ್ಕಿಂತ ವಿಳಂಬ ಆದರೆ ಫಾಸ್ಟ್ ಟ್ಯಾಗ್ ಬಳಕೆ ದಾರ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಬಹುದು.


5) ಹೆಚ್ಚುವರಿ ಶುಲ್ಕ ವಾಪಸಾತಿಗೆ ಮನವಿ
ಫಾಸ್ಟ್ ಟ್ಯಾಕ್ ಬ್ಲಾಕ್ ಲಿಸ್ಟ್ ನಲ್ಲಿದ್ದು, ಅಥವಾ ಕಡಿಮೆ ರೀಚಾರ್ಜ್ ಹೊಂದಿದ್ದರೆ ಟೋಲ್ ದಾಟುವಾಗ ಡಬಲ್ ಶುಲ್ಕ ಅಥವಾ ಹೆಚ್ಚುವರಿ ಶುಲ್ಕ ಕಡಿತ ಆದರೆ, 15 ದಿನಗಳ ಬಳಿಕ ಅಷ್ಟೇ ಬ್ಯಾಂಕ್ ಗಳಿಂದ ಶುಲ್ಕ ವಾಪಾಸಾತಿಗೆ ಮನವಿ ಮಾಡಬಹುದು.


6) ದಂಡದಿಂದ ತಪ್ಪಿಸಿಕೊಳ್ಳುವುದು ಹೇಗೆ?
1) ಫಾಸ್ಟ್ ಟ್ಯಾಗ್ ನಲ್ಲಿ ನಿಗದಿತ ಹಣ ಇರುವಂತೆ ನೋಡಿಕೊಳ್ಳಬೇಕು
2)ಬ್ಲಾಕ್ ಲಿಸ್ಟ್ ಗೆ ಹೋಗದಂತೆ, ಫಾಸ್ಟ್ ಟ್ಯಾಗ್ ಆಕ್ಟಿವ್ ಇರುವಂತೆ ನೋಡಿಕೊಳ್ಳಬೇಕು.
3)ನಂತರ ಹೆಚ್ಚುವರಿ ಹಣ ಕಡಿತ ಆಗುವುದನ್ನು ತಪ್ಪಿಸಲು ಹಣ ಕಡಿತ ಸಮಯವನ್ನು ನೋಡಿಕೊಳ್ಳಬೇಕು
4)ಫಾಸ್ಟ್ ಟ್ಯಾಗ್ ಟ್ಯಾಬ್ ಅನ್ನು ಆಕ್ಟಿವ್ ಇರಿಸಿಕೊಳ್ಳಬೇಕು, ಇದರಿಂದ ಹಣ ಪಾವತಿ ರಿಜೆಕ್ಟ್ ಆಗುವ ಸಾಧ್ಯತೆ ತಡೆಯಬಹುದು.


ನಗದುರಹಿತ ವ್ಯವಹಾರ ಉತ್ತೇಜಿಸಲು ಎಲೆಕ್ಟ್ರಾನಿಕ್ ಉಪಕರಣದ ಮೂಲಕ ಶುಲ್ಕ ಸಂಗ್ರಹಿಸುವ ವಿಧಾನಕ್ಕೆ ಫಾಸ್ಟ್ ಟ್ಯಾಗ್ ಅನ್ನು ದೇಶದಾದ್ಯಂತ ಟೋಲ್ ಪ್ಲಾಝಾಗಳಲ್ಲಿ ಜಾರಿಗೆ ತರಲಾಗಿದೆ. ವಾಹನಗಳು ಟೋಲ್ ದಾಟುವಾಗ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ತಂತ್ರಜ್ಞಾನದ ಮೂಲಕ ಸ್ವಯಂಚಾಲಿತ ಮಾದರಿಯಲ್ಲಿ ಜೋಡಣೆಯಾಗಿರುವ ಬ್ಯಾಂಕ್ ನಿಂದ ಟೋಲ್ ಶುಲ್ಕ ಪಾವತಿ ಆಗಲಿದೆ.

Pages