ದುಬೈ: ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಎ ಗುಂಪಿನ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿದ ಪಾಕ್ 241ರನ್ ಕಲೆಹಾಕಿದೆ. ಆ ಮೂಲಕ ಭಾರತಕ್ಕೆ 242 ರನ್‌ಗಳ ಗುರಿ ನೀಡಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 49.4 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 241 ರನ್ ಕಲೆಹಾಕಿದೆ.
ಪಾಕ್ ಇನ್ನಿಂಗ್ಸ್: ಬದ್ಧ ವೈರಿಗಳ ಕಾದಾಟದಲ್ಲಿ ಮೊದಲು ಬ್ಯಾಟ್ ಮಾಡಲು ಬಂದ ಪಾಕಿಸ್ತಾನ ಪರವಾಗಿ ಬಾಬರ್ ಅಜಂ ಹಾಗೂ ಇಮಾಮ್ ಉಲ್-ಹಕ್ ಇನ್ನಿಂಗ್ಸ್ ಆರಂಭಿಸಿದರು. ಆದರೆ ಪಾಕ್‌ಗ ನಿರೀಕ್ಷತ ಆರಂಭ ಸಿಗಲಿಲ್ಲ. ಬಾಬರ್ ಅಜಂ 23 ರನ್ ಗಳಿಸಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಇಮಾಮ್ 10 ರನ್ ಗಳಿಸಿದ್ದ ವೇಳೆ ಇಲ್ಲದ ರನ್ ಕದಿಯಲು ಹೋಗಿ ಅಕ್ಷರ್ ಪಟೇಲ್ ಗುಡ್ ಥ್ರೋಗೆ ವಿಕೆಟ್ ಕಳೆದುಕೊಂಡರು.
ನಂತರ ಜೊತೆಯಾದ ಸೌದ್ ಶಾಕಿಲ್ ಹಾಗೂ ನಾಯಕ ಮೊಹಮ್ಮದ್ ರಿಜ್ವಾನ್ ಚೇತರಿಕೆಯ ಆಟವಾಡಿದರು. ಶಾಕಿಲ್ 76 ಎಸೆತಗಳಲ್ಲಿ 62 ರನ್ ಬಾರಿಸಿದರೇ, ಇತ್ತ ರಿಜ್ವಾನ್ 77 ಎಸೆತಗಳಲ್ಲಿ 46 ರನ್ ಬಾರಿಸಿದರು.
ಉಳಿದಂತೆ ಆಘಾ 19, ತಾಹೀರ್ 4, ಶಾಹೀನ್ ಶಾ ಅಫ್ರಿದಿ ಶೂನ್ಯ, ನಸೀಮ್ ಶಾ 14 ರನ್, ಹ್ಯಾರಿಸ್ ರೌಫ್ 8, ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ಕುಶ್ದಿಲ್ ಶಾ 38 ರನ್ ಗಳಿಸಿದರು. ಅಬ್ರಾರ್ ಯಾವುದೇ ಖಾತೆ ತೆರೆಯದೇ ನಾಟ್‌ಔಟ್ ಆಗಿ ಉಳಿದರು.
ಟೀಂ ಇಂಡಿಯಾ ಪರವಾಗಿ ಕುಲ್ದೀಪ್ ಯಾದವ್ ಮೂರು, ಹಾರ್ದಿಕ್ ಪಾಂಡ್ಯ ಎರಡು ವಿಕೆಟ್, ಅಕ್ಷರ್ ಪಟೇಲ್, ಜಡೆಜಾ ಹಾಗೂ ಹರ್ಷಿತ್ ರಾಣಾ ತಲಾ ಒಂದೊಂದು ವಿಕೆಟ್ ಕಬಳಿಸಿ ಮಿಂಚಿದರು.
