ಬೆಳ್ತಂಗಡಿ : ಮುಂಡಾಜೆ ಕಾಣಿಕೆ ಡಬ್ಬಿಯಿಂದ ಹಣ ಕಳ್ಳತನ - News Ubaar

ಇತ್ತೀಚಿನ ಸುದ್ದಿ

Subscribe

ಮಂಗಳವಾರ, ಫೆಬ್ರವರಿ 18, 2025

ಬೆಳ್ತಂಗಡಿ : ಮುಂಡಾಜೆ ಕಾಣಿಕೆ ಡಬ್ಬಿಯಿಂದ ಹಣ ಕಳ್ಳತನ


ಬೆಳ್ತಂಗಡಿ
: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಚಿಬಿದ್ರೆ- ಮುಂಡಾಜೆ ಗಡಿ ಭಾಗದ ರಸ್ತೆ ಬದಿ ಇರುವ ಶ್ರೀ ಉಳ್ಳಾಯ-ಉಳ್ಳಾಲ್ತಿ ಕಟ್ಟೆಯ ಕಾಣಿಕೆ ಡಬ್ಬಿಯನ್ನು ಒಡೆದು ಹಣ ಕಳ್ಳತನ ಮಾಡಿದ ಘಟನೆ ಮಂಗಳವಾರ ಹಗಲು ಹೊತ್ತು ನಡೆದಿದೆ.

ಮಧ್ಯಾಹ್ನ 11ರಿಂದ ಒಂದು ಗಂಟೆ ಅವಧಿಯೊಳಗೆ ಯಾರೋ ಕಳ್ಳರು ಡಬ್ಬಿಯನ್ನು ಒಡೆದು ಹಣವನ್ನು ದೋಚಿದ್ದಾರೆ. ವಾರಕ್ಕೆ ಒಮ್ಮೆ ಕಾಣಿಕೆ ಡಬ್ಬಿಯಿಂದ ಸಮಿತಿಯವರು ಹಣ ಸಂಗ್ರಹಿಸುತ್ತಿದ್ದರು. ಸುಮಾರು 3 ಸಾವಿರ ರೂ.ಗಿಂತ ಅಧಿಕ ಕಾಣಿಕೆ ಜಮೆಯಾಗುತ್ತಿತ್ತು. ಕಳೆದ ನಾಲ್ಕು ದಿನಗಳ ಹಿಂದೆ ಹಣ ಸಂಗ್ರಹಿಸಿದ್ದು, 2 ಸಾವಿರ ರೂ.ಗಿಂತ ಅಧಿಕ ಹಣ ಕಳ್ಳತನವಾಗಿರಬಹುದು ಎಂದು ಇಲ್ಲಿನ ಮುಖ್ಯಸ್ಥ ಗಣೇಶ ಬಂಗೇರ ತಿಳಿಸಿದ್ದಾರೆ.

Pages