ಕುಪ್ಪೆಟ್ಟಿ :ಬದ್ರಿಯಾ ಜುಮಾ ಮಸೀದಿ ಕುಪ್ಪೆಟ್ಟಿ ಇದರ ಅದೀನದಲ್ಲಿರುವ ಬದ್ರಿಯಾ ಯಂಗ್ ಮೆನ್ಸ್ ಅಸೋಸಿಯೇಷನ್ ಕುಪ್ಪೆಟ್ಟಿ ಇದರ ವತಿಯಿಂದ ಯೂಸುಫಿಯ್ಯ ದಫ್ ರಾತಿಬ್ ತಂಡ ಕುಂದಾಪುರ ರವರಿಂದ ರಿಫಾಯಿ ದಫ್ ರಾತಿಬ್ ಮತ್ತು ದರ್ಸ್ ವಿದ್ಯಾರ್ಥಿಗಳಿಂದ ಬುರ್ದಾ ಮಜ್ಲಿಸ್ ಕಾರ್ಯಕ್ರಮವು ಇಂದು (ಫೆಬ್ರವರಿ 16) ರಂದು ಮಗ್ರಿಬ್ ನಮಾಝಿನ ಬಳಿಕ ಬದ್ರಿಯಾ ಜುಮಾ ಮಸೀದಿ ಕುಪ್ಪೆಟ್ಟಿಯಲ್ಲಿ ನೆರವೇರಲಿದೆ.
ರಿಫಾಯಿ ದಫ್ ರಾತೀಬ್ ಅನ್ನು ಮುಖ್ಯವಾಗಿ ಆಧ್ಯಾತ್ಮಿಕ ಶುದ್ಧತೆ, ಭಕ್ತಿ, ಮತ್ತು ಅಲ್ಲಾಹನ ಸ್ಮರಣೆಯ (ಜಿಕ್ರ್) ಉದ್ದೇಶದಿಂದ ಆಚರಿಸಲಾಗುತ್ತದೆ.
ರಿಫಾಯಿ ದಫ್ ರಾತೀಬ್ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಇದು ಭಕ್ತಿ, ಶಾಂತಿ ಮತ್ತು ಆಧ್ಯಾತ್ಮಿಕ ಏಕತೆಯ ಸಂಕೇತವಾಗಿದೆ.
ಸುಫಿ ಸಂತ ಶೇಖ್ ಅಹ್ಮದ್ ಅಲ್-ರಿಫಾಯಿ (RA) ಅವರ ತತ್ತ್ವಶಾಸ್ತ್ರದ ಪ್ರಕಾರ, ಭಕ್ತಿ ಮತ್ತು ಪ್ರಾರ್ಥನೆಯ ಮೂಲಕ ಮನಸ್ಸನ್ನು ಶುದ್ಧಗೊಳಿಸಿ ಶಾಂತಿ ಸಾಧಿಸಬಹುದು ಎಂಬುದಾಗಿದೆ .
