ಬೆಂಗಳೂರು, ಫೆಬ್ರವರಿ 25: ಬೆಂಗಳೂರಿನ ಶ್ರೀನಗರ ಪ್ಯಾಲೇಸ್, ಪ್ಯಾಲೇಸ್ ಗ್ರೌಂಡ್ಸ್ ನಲ್ಲಿ ಫೆಬ್ರವರಿ 26 ರಂದು "ಇದ್ ಬೆಂಗಳೂರ್ ಬ್ಯಾರಿಙಲೋ ಗಮ್ಮತ್ …" ಎಂಬ ಅದ್ದೂರಿ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರಿನಲ್ಲಿ ವಾಸಿಸುವ ಎಲ್ಲಾ ಅನಿವಾಸಿ ಬ್ಯಾರಿಗಳನ್ನು ಒಗ್ಗೂಡಿಸುವ ಮಹತ್ವದ ಕಾರ್ಯಕ್ರಮ ಇದಾಗಿದೆ.
ಈ ಕಾರ್ಯಕ್ರಮವನ್ನು ಬ್ಯಾರಿ ಸೆಂಟ್ರಲ್ ಕಮಿಟಿ ಬೆಂಗಳೂರು ತನ್ನ ಒಂದನೇ ವರ್ಷದ ಅಂಗವಾಗಿ ಆಯೋಜಿಸಿದ್ದು, ಸಮುದಾಯದ ಒಗ್ಗಟ್ಟಿಗೆ, ಸಂಸ್ಕೃತಿಯ ಬೆಳವಣಿಗೆಗೆ ಮತ್ತು ಸೇವಾ ಚಟುವಟಿಕೆಗಳ ಪ್ರೋತ್ಸಾಹಕ್ಕೆ ವಿಶೇಷ ವೇದಿಕೆಯಾಗಿ ಬದಲಾದಂತಾಗಿದೆ.
ಬೆಳಿಗ್ಗೆ 11 ಗಂಟೆಗೆ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ಸಿಗಲಿದ್ದು, ಇಡೀ ದಿನ ವಿವಿಧ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸೇವಾ ಚಟುವಟಿಕೆಗಳು ನಡೆಯಲಿವೆ.
ಸೆಮಿನಾರ್ – ಸಮಾಜದ ಪ್ರಗತಿಯ ಕುರಿತ ಚರ್ಚೆ
ವಸ್ತು ಪ್ರದರ್ಶನ – ಸಮುದಾಯದ ಸಾಧನೆಗಳ ಪ್ರದರ್ಶನ
ರಕ್ತದಾನ ಶಿಬಿರ – ಜೀವ ಉಳಿಸುವ ಸೇವಾ ಕಾರ್ಯಕ್ರಮ
ಬ್ಯಾರಿ ಫುಡ್ ಫೆಸ್ಟಿವಲ್ – ಪರಂಪರೆಯ ಖಾದ್ಯಗಳ ಸವಿಗೆ ಅವಕಾಶ
ಮಕ್ಕಳ ಸ್ಪರ್ಧೆಗಳು – ಕ್ರೀಡೆ, ಕಲಾ ಚಟುವಟಿಕೆಗಳ ಪ್ರೋತ್ಸಾಹ
ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮ – ಜನಪದ, ನೃತ್ಯ, ಸಂಗೀತ
ಬ್ಯಾರಿ ಕವಿಗೋಷ್ಠಿ – ಸಾಹಿತ್ಯ, ಶೈಕ್ಷಣಿಕ ವಿಕಾಸದ ವೇದಿಕೆ
ಸಾಧಕರಿಗೆ ಸನ್ಮಾನ – ಸಮುದಾಯದ ಪ್ರತಿಭೆಗಳ ಗೌರವ
ಗಣ್ಯಾತಿಗಣ್ಯರ ಸಭಾ ಕಾರ್ಯಕ್ರಮ – ರಾಜ್ಯ ಮಟ್ಟದ ನಾಯಕರು, ಪ್ರತಿಭಾವಂತರ ಸಮ್ಮೇಳನ
ಈ ಕಾರ್ಯಕ್ರಮವು ಬೆಂಗಳೂರು ಮತ್ತು ಸುತ್ತಮುತ್ತಲಿನ ಎಲ್ಲಾ ಬ್ಯಾರಿ ಜನಾಂಗದ ಜನರು ಸೇರಿ, ತಮ್ಮ ಪರಂಪರೆ, ಸೇವಾ ಚಟುವಟಿಕೆ ಹಾಗೂ ಸಮಾಜದ ಒಗ್ಗಟ್ಟನ್ನು ಹಿರಿಮೆಪಡುವ ಒಂದು ಅಪರೂಪದ ಕೂಟ.
ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
