ಉಪ್ಪಿನಂಗಡಿ , ಫೆಬ್ರವರಿ 2025: ಜನಸಾಮಾನ್ಯರ ಆರೋಗ್ಯದತ್ತ ಗಮನ ಹರಿಸುವ ಉದ್ದೇಶದಿಂದ (ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರೀ) ಮಂಗಳೂರು, ರಿಫಾಯಿ ಜುಮಾ ಮಸೀದಿ ಜೋಗಿಬೆಟ್ಟು, ಕುವ್ವತುಲ್ ಇಸ್ಲಾಮ್ ಯಂಗ್ ಮೆನ್ಸ್ ಅಸೋಸಿಯೇಷನ್ ಜೋಗಿಬೆಟ್ಟು ಸಹಯೋಗದಲ್ಲಿ ಏನಪೋಯ ಮೆಡಿಕಲ್ ಕಾಲೇಜು & ಆಸ್ಪತ್ರೆ ದೇರಳಕಟ್ಟೆ ತಂಡದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರವು ಆರೋಗ್ಯ ಸೇವೆಗಳನ್ನು ಸಾರ್ವಜನಿಕರಿಗೆ ಇನ್ನಷ್ಟು ಸುಲಭವಾಗಿ ಒದಗಿಸುವಂತೆ ಮಾಡಲಿದೆ.
ದಿನಾಂಕ: ಫೆಬ್ರವರಿ 16, 2025
ಸ್ಥಳ: ರಿಫಾಯಿ ಜುಮಾ ಮಸೀದಿ ವಠಾರ ಜೋಗಿಬೆಟ್ಟು, ಉಪ್ಪಿನಂಗಡಿ,
ಸಮಯ: ಬೆಳಿಗ್ಗೆ 8:00 ರಿಂದ ಮಧ್ಯಾಹ್ನ 1:00 ರವರೆಗೆ
ಈ ಶಿಬಿರದಲ್ಲಿ ಉಚಿತ ನೇತ್ರ ತಪಾಸಣೆಗಳು ಮತ್ತು ವೈದ್ಯಕೀಯ ಸಲಹೆಗಳು, ಸ್ಥಳದಲ್ಲೇ ಕನ್ನಡಕ ವಿತರಣೆ ಲಭ್ಯವಿರುತ್ತವೆ.
